ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಆಡಳಿತ ನೆಲೆಸುತ್ತಿರುವ ವಿಚಾರವಾಗಿ ಜಗತ್ತಿನಾದ್ಯಂತ ಅನೇಕ ದೇಶಗಳು ಎಚ್ಚರಿಕೆಯ ನಿಲುವು ತಳೆದಿವೆ.
ಇದೇ ವೇಳೆ, ತಂತ್ರಜ್ಞಾನ ಲೋಕದ ದಿಗ್ಗಜ ಫೇಸ್ಬುಕ್ ತಾಲಿಬಾನ್ ಮೇಲೆ ಬಹಿಷ್ಕಾರ ಹೇರಿದ್ದು, ಅಮೆರಿಕದ ಕಾನೂನಿನ ಅನುಸಾರ ಭಯೋತ್ಪಾದಕ ಸಂಘಟನೆ ಬೆಂಬಲಿಸುವ ಎಲ್ಲಾ ಸರಕನ್ನು ತನ್ನೆಲ್ಲಾ ಪ್ಲಾಟ್‌ಫಾರಂಗಳಿಂದಲೂ ಕಿತ್ತೊಗೆಯ್ಯುವುದಾಗಿ ತಿಳಿಸಿದೆ.
ಬಿಗ್ ನ್ಯೂಸ್: IRCTC ಯಿಂದ ಮಹಿಳೆಯರಿಗೆ ರಕ್ಷಾ ಬಂಧನದ ಗಿಫ್ಟ್
ತಾಲಿಬಾನ್ ಅನ್ನು ಭಯೋತ್ಪಾದಸ ಸಂಘಟನೆ ಎಂದು ಪರಿಗಣಿಸುವ ತಾನು, ಈ ಸಂಘಟನೆಗೆ ಸಂಬಂಧಿಸಿದ ಯಾವುದೇ ಸರಕಗಳು ತನ್ನ ಪೋರ್ಟಲ್‌ಗಳಲ್ಲಿ ಕಂಡುಬಂದರೆ ಕೂಡಲೇ ಅದನ್ನು ಕಿತ್ತೊಗೆಯಲು ಅಫ್ಘನ್ ತಜ್ಞರ ತಂಡವನ್ನೇ ನೇಮಕ ಮಾಡಿರುವುದಾಗಿ ತಿಳಿಸಿದೆ.
ತನ್ನ ಸಂದೇಶಗಳನ್ನು ರವಾನೆ ಮಾಡಲು ತಾಲಿಬಾನ್ ಫೇಸ್ಬುಕ್ ಅನ್ನು ಬಳಸುತ್ತಿತ್ತು.