ಫೇಸ್ಬುಕ್, ಇನ್ಸ್ಟಾಗ್ರಾಂಗೆ ಸಂಬಂಧಿಸಿದಂತೆ ಬಿಗ್ ಅಪ್ಡೇಟ್ ಇದೆ. ತಪ್ಪಾಗಿಯೂ ಈ ರೀತಿಯ ಪೋಸ್ಟ್ ಹಾಕಬೇಡಿ, ಒಂದೊಮ್ಮೆ ಹಾಕಿದರೆ ನಿಮ್ಮ ಖಾತೆಯೇ ಬ್ಯಾನ್ ಆಗಬಹುದು.
ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಮ್ ಗರ್ಭಪಾತ ಮಾತ್ರೆಗೆ ಪ್ರೋತ್ಸಾಹ ನೀಡುವ ಪೋಸ್ಟ್ಗಳನ್ನು ತೆಗೆದುಹಾಕುತ್ತಿವೆ. ಮಹಿಳೆಯರಿಗೆ ಗರ್ಭಪಾತದ ಮಾತ್ರೆಗಳನ್ನು ನೀಡುವ ಪೋಸ್ಟ್ಗಳನ್ನು ತೆಗೆದುಹಾಕಲು ಪ್ರಾರಂಭಿಸಲಾಗಿದ್ದು, ಈ ಬಳಕೆದಾರರನ್ನು ತಾತ್ಕಾಲಿಕವಾಗಿ ನಿಷೇಧಿಸಲಾಗಿದೆ.
ಇತ್ತೀಚೆಗೆ ರೋಯ್ ವರ್ಸಸ್ ವೇಡ್ ಪ್ರಕರಣದಲ್ಲಿ ಗರ್ಭಪಾತವನ್ನು ಕಾನೂನುಬದ್ಧಗೊಳಿಸಿದ 50 ವರ್ಷಗಳ ಹಳೆಯ ನಿರ್ಧಾರವನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿತು. ಯುಎಸ್ ಸುಪ್ರೀಂ ಕೋರ್ಟ್ನ ಈ ತೀರ್ಪಿನ ನಂತರ, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಮ್ನಲ್ಲಿರುವ ಪೋಸ್ಟ್ ತೆಗೆದು ಹಾಕಲಾಗುತ್ತಿದೆ.
ಅಲಿಯಾ ಭಟ್ ತಾನು ಗರ್ಭಿಣಿ ಎಂದು ಹೇಳುತ್ತಲೇ ಈ ರೆಡ್ಡಿಟ್ ಬಳಕೆದಾರಳಿಗೆ ಮರಳಿ ಸಿಕ್ಕಿದೆ ನಿಷೇಧಗೊಂಡಿದ್ದ ಖಾತೆ….!
ಅಂತಹ ಪೋಸ್ಟ್ಗಳು ಔಷಧೀಯ ನೀತಿ ಉಲ್ಲಂಘಿಸುತ್ತದೆ ಎಂದು ಹೇಳುತ್ತದೆ. ಫೇಸ್ಬುಕ್ ಬಳಕೆದಾರರು ತಮ್ಮ ಪೋಸ್ಟ್ನಲ್ಲಿ ‘ನಾನು ಗರ್ಭಪಾತ ಮಾತ್ರೆಗಳನ್ನು ಮೇಲ್ ಮಾಡುತ್ತೇನೆ. ನನಗೆ ಮೆಸೇಜ್ ಮಾಡಿ’ ಎಂಬ ಪೋಸ್ಟ್ಗಳನ್ನು ತೆಗೆದುಹಾಕುತ್ತಿವೆ.
ಮೆಟಾ ವಕ್ತಾರ ಆಂಡಿ ಸ್ಟೋನ್ ಸೋಮವಾರ ಟ್ವೀಟ್ ಮಾಡಿದ್ದು, “ಔಷಧಗಳನ್ನು ಖರೀದಿಸಲು, ಮಾರಾಟ ಮಾಡಲು, ಉಡುಗೊರೆ ನೀಡಲು, ಕೋರಲು ಅಥವಾ ದೇಣಿಗೆ ನೀಡಲು ಬಯಸುವ ವಿಷಯವನ್ನು ಅನುಮತಿಸಲಾಗುವುದಿಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ.