ಸಾಮಾಜಿಕ ಜಾಲತಾಣ ಫೇಸ್ ಬುಕ್ ಖಾತೆ ಏಕಾಏಕಿ ಲಾಗ್ ಔಟ್ ಆಗಿದ್ದು, ಬಳಕೆದಾರರು ಕೆಲ ಕಾಲ ಗೊಂದಲಕ್ಕೊಳಗಾದ ಘಟನೆ ನಡೆದಿದೆ.
ಕಳೆದ ರಾತ್ರಿ ಸಾಮಾಜಿಕ ಜಾಲತಾಣ ಫೇಸ್ ಬುಕ್ ನ ಹಲವು ಖಾತೆಗಳು ಇದ್ದಕ್ಕಿದ್ದಂತೆ ಲಾಗ್ ಔಟ್ ಆಗಿದೆ. ಫೇಸ್ ಬುಕ್ ಬಳಸುತ್ತಿದ್ದ ಅನೇಕ ಬಳಕೆದಾರರು ಪಾಸ್ ವರ್ಡ್ ಬರೆದು ಮತ್ತೆ ಲಾಗ್ ಇನ್ ಆಗಲು ಪ್ರಯತ್ನಿಸಿದ್ದಾರೆ. ಹ್ಯಾಕ್ ಆಗಿದೆಯೇ? ಎಂದು ಗೊಂದಲಕ್ಕೀಡಾಗಿದ್ದಾರೆ.
ಮತ್ತೊಮ್ಮೆ ಪರಿಶೀಲಿಸಿದಾಗ ಫೇಸ್ ಬುಕ್ ಖಾತೆ ಲಾಗಿನ ಆಗಿದೆ. ಸದ್ಯ ಫೇಸ್ ಬುಕ್ ಓಪನ್ ಆಯಿತಲ್ಲಾ ಎಂದು ಬಳಕೆದಾರರು ನಿಟ್ಟುಸಿರುಬಿಟ್ಟಿದ್ದಾರೆ. ಸರ್ವರ್ ಡೌನ್ ಆದ ಕಾರಣ ಈ ಸಮಸ್ಯೆ ಎದುರಾಗಿತ್ತೆಂದು ಹೇಳಲಾಗಿದೆ.