ಶಿವಮೊಗ್ಗ: ಮಹಿಳೆಯೊಬ್ಬರ ಹೆಸರಿನಲ್ಲಿ ನಕಲಿ ಫೇಸ್ ಬುಕ್ ಖಾತೆಯನ್ನು ತೆರೆದು ಮಹಿಳೆಯ ಪೋಟೋವನ್ನು ಅಪ್ ಲೋಡ್ ಮಾಡಿ ಅಶ್ಲೀಲ ಮೆಸೇಜ್ ಹಾಕುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಈ ಕುರಿತು ಮಹಿಳೆ ದೂರು ನೀಡಿದ್ದು ಸಿ.ಇ.ಎನ್ ಕ್ರೈಂ ಪೋಲಿಸ್ ಠಾಣೆ, ಶಿವಮೊಗ್ಗದಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ಬಗ್ಗೆ ಗುರುರಾಜ್, ಪಿಐ ಸಿಇಎನ್ ಕ್ರೈಂ ಪೋಲಿಸ್ ಠಾಣೆ, ಸಿಬ್ಬಂದಿಗಳಾದ ನಾಗರಾಜ್, ಕುಮಾರ್ ಬಣಕಾರ್ ಹಾಗೂ ಸಲ್ಮಾ ಅವರನ್ನೊಳಗೊಂಡ ತಂಡ ಕಾರ್ಯಾಚರಣೆ ನಡೆಸಿ, ಫೆ.15 ರಂದು ಆರೋಪಿ ಮೈಸೂರು ನಂದನಗೂಡಿನ ಸುಪ್ರೀತ್. ಎಸ್.(22) ಎಂಬಾತನನ್ನು ವಿಚಾರಣೆ ನಡೆಸಿ, ದಸ್ತಗಿರಿ ಮಾಡಿದೆ.
ಆರೋಪಿಯಿದ ಕೃತ್ಯಕ್ಕೆ ಬಳಸಿದ ಮೊಬೈಲ್ ಫೋನ್ ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ ಎಂದು ಎಸ್ಪಿ ಕೆ.ಎಂ. ಶಾಂತರಾಜು ತಿಳಿಸಿದ್ದಾರೆ.