ಚೀನಾದ ಕೆಲ ಮಹಿಳೆಯರು ಸೂರ್ಯನ ಕಿರಣಗಳಿಂದ ಬಚಾವಾಗಲು ಈ ಫೇಸ್ ಕಿನಿ ಮಾಸ್ಕ್ ಹಾಕಿಕೊಳ್ಳುತ್ತಾರಂತೆ. ಈ ಫೇಸ್ ಕಿನಿಗಳು ನೋಡಲು ವಿಚಿತ್ರ ಎನಿಸಬಹುದು. ಆದರೆ ಇದು ಸೂರ್ಯನ ರಕ್ಷಣೆಗೆ ಅತ್ಯಂತ ಪರಿಣಾಮಕಾರಿಯಾಗಿದೆ.
ಇದನ್ನು ಬಳಸಿದರೆ ಸೂರ್ಯನ ಹಾನಿಕಾರಕ ಕಿರಣಗಳಿಂದ ಮುಕ್ತಿ ಪಡೆಯಬಹುದು. ಇದನ್ನು ಫ್ಯಾಬ್ರಿಕ್ ನಲ್ಲಿ ಮಾಡಿರುವ ಕಾರಣ ತ್ವಚೆಗೆ ಯಾವುದೇ ಸಮಸ್ಯೆ ಇರುವುದಿಲ್ಲ. ಇದನ್ನು ಯಾವುದೇ ಗ್ರೀಸ್ ಹಾಗೂ ತೈಲದಿಂದ ಬಳಸಿಲ್ಲ. ಹಾಗಾಗಿ ಮುಖಕ್ಕೆ ಯಾವ ಅಲರ್ಜಿ ಕೂಡ ಆಗುವುದಿಲ್ಲ. ಅಂದಹಾಗೆ ವಿವಿಧ ಬಣ್ಣಗಳಲ್ಲಿ ಹಾಗೂ ಅದ್ಭುತ ವಿನ್ಯಾಸಗಳಲ್ಲಿ ಇವು ಲಭ್ಯ.
ಮುಖವೇ ಎಕ್ಸ್ ಪೋಸ್ ಆಗದಿದ್ದಾಗ ಯಾವ ಲೋಷನ್, ಕ್ರೀಮ್ ಹಚ್ಚುವ ಟೆನ್ಶನ್ ಇಲ್ಲ ಅನ್ನುವುದು ಖಂಡಿತ ಸರಿ.