
ಆನ್‌ಲೈನ್‌ನಲ್ಲಿ ಹ್ಯಾಷ್ ಟ್ಯಾಗ್ ಬಳಸಿ ಫ್ಯಾಬ್ ಇಂಡಿಯಾ ಬಹಿಷ್ಕರಿಸಿ ಎಂಬ ಟ್ರೆಂಡ್ ಶುರುವಾದ ನಂತರ ಜಶ್ನ್-ಇ-ರಿವಾಜ್ ಹೆಸರಿನ ದೀಪಾವಳಿ ಜಾಹೀರಾತನ್ನು ತೆಗೆದುಹಾಕಿದೆ.
ಹಿಂದೂ ಹಬ್ಬದಲ್ಲಿ ಜಾತ್ಯಾತೀತತೆ ಮತ್ತು ಮುಸ್ಲಿಂ ಸಿದ್ಧಾಂತಗಳನ್ನು ಅನಗತ್ಯವಾಗಿ ಎತ್ತಿಹಿಡಿದಿರುವುದಕ್ಕೆ ಅನೇಕರು ಬ್ರಾಂಡ್ ಅನ್ನು ಟೀಕಿಸಿದ್ದಾರೆ.
ಟ್ವಿಟ್ ನಲ್ಲಿ ಏನಿತ್ತು..?
ಫ್ಯಾಬ್ ಇಂಡಿಯಾ ಅವರ ಟ್ವೀಟ್, ಮಾಡೆಲ್‌ಗಳು ತಮ್ಮ ಹೊಸ ದೀಪಾವಳಿ 2021ರ ಹೊಸ ಉಡುಪನ್ನು ಧರಿಸಿರುವ ಮಾದರಿಗಳನ್ನು ಚಿತ್ರಿಸುವ ಪ್ರಚಾರದ ಪೋಸ್ಟ್ ಆಗಿದೆ. “ನಾವು ಪ್ರೀತಿ ಮತ್ತು ಬೆಳಕಿನ ಹಬ್ಬವನ್ನು ಸ್ವಾಗತಿಸುತ್ತಿರುವುದರಿಂದ, ಫ್ಯಾಬ್ ಇಂಡಿಯಾದ ಜಶ್ನ್-ಇ-ರಿವಾಜ್ ಭಾರತೀಯ ಸಂಸ್ಕೃತಿಗೆ ಸುಂದರವಾಗಿ ಗೌರವ ಸಲ್ಲಿಸುವ ಸಂಗ್ರಹವಾಗಿದೆ” ಎಂದು ಪೋಸ್ಟ್ ನಲ್ಲಿ ತಿಳಿಸಲಾಗಿತ್ತು. ಇದೀಗ ಈ ಪೋಸ್ಟ್ ಅನ್ನು ಅಳಿಸಲಾಗಿದೆ.
#boycottfabindia ಅಂತಾ ಟ್ವಿಟ್ಟರ್‌ನಲ್ಲಿ ತೀವ್ರವಾಗಿ ಟ್ರೆಂಡಿಂಗ್ ಆರಂಭಿಸಿದ ನಂತರ ಟ್ವೀಟ್ ಅನ್ನು ತಕ್ಷಣವೇ ತೆಗೆದು ಹಾಕಲಾಗಿದೆ. ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ತೇಜಸ್ವಿ ಸೂರ್ಯ ಕೂಡ ಟ್ವಿಟ್ಟರ್ ಪೋಸ್ಟ್‌ನಲ್ಲಿ ಜಾಹೀರಾತನ್ನು ಟೀಕಿಸಿದ್ದಾರೆ.
ಟ್ವೀಟ್ ಅನ್ನು ಸಾಮಾಜಿಕ ಮಾಧ್ಯಮದಲ್ಲಿ ಹಲವಾರು ಮಂದಿ ‘ಸಾಂಸ್ಕೃತಿಕವಾಗಿ ಸೂಕ್ತವಲ್ಲ’ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಹಿಂದೂ ಹಬ್ಬವನ್ನು ಪುನರ್ರಚಿಸುವ ಮತ್ತು ಅದರಲ್ಲಿ ಜಾತ್ಯತೀತತೆಯನ್ನು ತುಂಬುವ ಅಗತ್ಯವಿಲ್ಲ ಎಂದು ಕೆಲವರು ಹೇಳಿದ್ದಾರೆ.