alex Certify ‘F**K off’ ಪದ ಬಳಸುವ ಮುನ್ನ ಇರಲಿ ಎಚ್ಚರ: ಇದು ಲೈಂಗಿಕ ದೌರ್ಜನ್ಯ ಎಂದ ನ್ಯಾಯಾಲಯ; ಎಫ್​ಐಆರ್​ ರದ್ದತಿಗೆ ನಕಾರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘F**K off’ ಪದ ಬಳಸುವ ಮುನ್ನ ಇರಲಿ ಎಚ್ಚರ: ಇದು ಲೈಂಗಿಕ ದೌರ್ಜನ್ಯ ಎಂದ ನ್ಯಾಯಾಲಯ; ಎಫ್​ಐಆರ್​ ರದ್ದತಿಗೆ ನಕಾರ

ನವದೆಹಲಿ: ಮಹಿಳೆಗೆ ಬಯ್ಯುವ ಸಂದರ್ಭದಲ್ಲಿ​ F**k off ಶಬ್ದ ಬಳಕೆ ಮಾಡಿದರೆ ಅದು ಲೈಂಗಿಕ ದೌರ್ಜನ್ಯಕ್ಕೆ ಸಮ ಎಂದಿರುವ ದೆಹಲಿ ಕೋರ್ಟ್​, ವ್ಯಕ್ತಿಯೊಬ್ಬನ ವಿರುದ್ಧ ದಾಖಲಾದ ಎಫ್​ಐಆರ್​ ರದ್ದತಿಗೆ ನಿರಾಕರಿಸಿದೆ.

‘ಈ ಶಬ್ದವನ್ನು ವಿದೇಶಗಳಲ್ಲಿ ಬಳಸುತ್ತಾರೆ. ಇದು ಭಾರತೀಯ ಸಮಾಜದಲ್ಲಿ ಬಳಕೆಯಾಗದ ಪದ. ಇದು ಅಶ್ಲೀಲ ಪದವಾಗಿದೆ. ಇದನ್ನು ಬಳಸುವುದು ಅಕ್ಷಮ್ಯ’ ಎಂದು ಕೋರ್ಟ್​ ಹೇಳಿದೆ.

2019ರಲ್ಲಿ ತಮ್ಮ ವಿರುದ್ಧ ಈ ಪದ ಬಳಸಿದ್ದಕ್ಕಾಗಿ ವ್ಯಕ್ತಿಯೊಬ್ಬನ ವಿರುದ್ಧ ಮಹಿಳೆ ಸಲ್ಲಿಸಿದ್ದ ದೂರು ಸರಿಯಾಗಿದೆ ಎಂದು ಕೋರ್ಟ್​ ಅಭಿಪ್ರಾಯ ಪಟ್ಟಿದೆ. ತನ್ನ ವಿರುದ್ಧ ದಾಖಲಾಗಿದ್ದ ಎಫ್​ಐಆರ್​ ರದ್ದತಿಗೆ ಕೋರಿದ್ದ ವ್ಯಕ್ತಿಯ ಅರ್ಜಿಯನ್ನು ಕೋರ್ಟ್​ ವಜಾ ಮಾಡಿದೆ.

ಇದಕ್ಕೂ ಮೊದಲು ಆರೋಪಿಯು ಇದೇ ಮಹಿಳೆಗೆ “ಬಜಾರು ಔರತ್” ಎಂದು ನಿಂದಿಸಿದ್ದ. ನಂತರ ಈ​ ಪದವನ್ನೂ ಬಳಸಿದ್ದ. ಈ ಹಿನ್ನೆಲೆಯಲ್ಲಿ ಈತನ ವಿರುದ್ಧ ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ದೂರು ದಾಖಲಾಗಿತ್ತು.

‘ಈ ಪದವು ಲೈಂಗಿಕ ಶೋಷಣೆಯಾಗುವುದಿಲ್ಲ. ಕೇಂಬ್ರಿಡ್ಜ್ ನಿಘಂಟಿನಲ್ಲಿ ಈ ಪದಕ್ಕೆ ತೊರೆಯುವುದು ಅಥವಾ ದೂರ ಹೋಗುವುದು ಎಂದು ಉಲ್ಲೇಖಿಸಲಾಗಿದೆ. ಆದ್ದರಿಂದ ಇದು ಅಸಭ್ಯ ಪದ ಎನ್ನುವುದು ಸರಿಯಲ್ಲ’ ಎಂದು ವಕೀಲರು ವಾದಿಸಿದ್ದರು. ಆದರೆ ಇದು ಭಾರತೀಯ ಸಂಸ್ಕೃತಿಯಲ್ಲ, ಭಾರತದ ಸಮಾಜದಲ್ಲಿ ಇದೊಂದು ಕೆಟ್ಟ ಪದ ಎಂದಿರುವ ಕೋರ್ಟ್​, ಎಫ್​ಐಆರ್​ ರದ್ದು ಮಾಡಲು ಒಪ್ಪಲಿಲ್ಲ.

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...