ಬೆಂಗಳೂರಿನಲ್ಲಿ ಪಟಾಕಿ ಸಿಡಿದು 9 ಜನರ ಕಣ್ಣಿಗೆ ಹಾನಿಯಾಗಿದೆ. ಮಕ್ಕಳು ಸೇರಿದಂತೆ 9 ಮಂದಿ ಕಣ್ಣಿಗೆ ಹಾನಿಯಾಗಿದ್ದು, ಅನೇಕರು ಮಿಂಟೋ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದುಕೊಂಡಿದ್ದಾರೆ.
ದೀಪಾವಳಿ ಹಬ್ಬದ ಸಂಭ್ರಮದಲ್ಲಿ ಪಟಾಕಿ ಹೊಡೆಯುವುದು ಸಾಮಾನ್ಯ. ಅದರಲ್ಲೂ ಮಕ್ಕಳಿಗೆ ಪಟಾಕಿ ಎಂದರೆ ಅಚ್ಚುಮೆಚ್ಚು. ಹೀಗೆ ಪಟಾಕಿ ಸಿಡಿಸುವ ಸಂದರ್ಭದಲ್ಲಿ ಆಕಸ್ಮಿಕವಾಗಿ ಕಿಡಿ ತಾಗಿ ಮಕ್ಕಳ ಕಣ್ಣಿಗೆ ಹಾನಿಯಾಗಿದೆ. ಬೆಂಗಳೂರಿನಲ್ಲಿ 9 ಜನರು ದೀಪಾವಳಿ ಪಟಾಕಿ ಸಿಡಿಸುವಾಗ ಕಣ್ಣಿಗೆ ಹಾನಿ ಮಾಡಿಕೊಂಡಿದ್ದಾರೆ. ಇವರಲ್ಲಿ ಮಕ್ಕಳು ಹೆಚ್ಚಾಗಿದ್ದಾರೆ.