ವಿಪರೀತ ಸುಸ್ತಾದಾಗ, ಬಿಸಿಲಿನಿಂದ ಹೀಗೆ ಇತ್ಯಾದಿ ಕಾರಣಗಳಿಂದ ಬಾಯಾರಿಕೆಯಾಗುವುದು ಸಹಜ. ಆದರೆ ಕೆಲವೊಮ್ಮೆ ಎಷ್ಟೇ ನೀರು ಕುಡಿದರೂ ಬಾಯಿ ಒಣಗುವುದು ಕಡಿಮೆ ಆಗದೇ ಮತ್ತಷ್ಟೂ ನೀರು ಕುಡಿಯಬೇಕು ಎಂದು ಅನಿಸಿದರೆ, ಇದು ಆರೋಗ್ಯದಲ್ಲಿ ಏನೋ ಸಮಸ್ಯೆ ಇದೆ ಎಂಬುದನ್ನು ತಿಳಿಸುತ್ತದೆ.
ದಿನಕ್ಕೆ ಮೂರಿಂದ 4 ಲೀಟರ್ ತನಕ ನೀರು ಕುಡಿಯಬೇಕು ಎಂದು ಹೇಳುತ್ತಾರೆ. ಇದಕ್ಕೂ ಮೀರಿ ನೀರು ಕುಡಿಯಬೇಕು ಅನಿಸುವುದು ಹಾಗೇ ಎಷ್ಟೇ ನೀರು ಕುಡಿದರೂ ಬಾಯಿ ಒಣಗಿದಂತೆ ಆದರೆ ಕೂಡಲೇ ವೈದ್ಯರನ್ನು ಸಂಪರ್ಕಿಸುವುದು ಒಳ್ಳೆಯದು.
ನೀರು ಆರೋಗ್ಯಕ್ಕೆ ಒಳ್ಳೆಯದು ಹೌದು. ಆದರೆ ಇದನ್ನು ಅತೀಯಾಗಿ ಸೇವಿಸಿದರೆ ಕೂಡ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಬಹುದು. ಅಧಿಕ ಬಾಯಾರಿಕೆಯಾಗುವುದಕ್ಕೆ ‘ಪಾಲಿಡಿಪ್ಸಿಯಾ’ ಎಂದು ಕರೆಯುತ್ತಾರೆ. ಎಷ್ಟು ನೀರು ಕುಡಿದರೂ ದಾಹ ತೀರುವುದಿಲ್ಲ.
ಹಾಗಾಗಿ ಅತೀಯಾಗಿ ಬಾಯಾರಿಕೆಯಾದಾಗ ನಿರ್ಲಕ್ಷಿಸಬೇಡಿ ಸೂಕ್ತ ವೈದ್ಯರನ್ನು ಸಂಪರ್ಕಿಸಿ. ನಿಮ್ಮ ಜೀವನಶೈಲಿಯನ್ನು ಬದಲಾಯಿಸಿಕೊಳ್ಳಿ. ವ್ಯಾಯಾಮ, ವಾಕಿಂಗ್, ಡಯೆಟ್ ಗೆ ಹೆಚ್ಚಿನ ಆದ್ಯತೆ ನೀಡಿ.