ಮಡಿಕೇರಿ : ಹೆಂಡತಿ ಮೇಲೆ ಬಹಳ ಅನುಮಾನ ವ್ಯಕ್ತಪಡಿಸುತ್ತಿದ್ದ ಪತಿಯೋರ್ವ ಆಕೆಗೆ 5 ಬಾರಿ ಚಾಕುವಿನಿಂದ ಇರಿದು ತಾನು ಕೂಡ ಆತ್ಮಹತ್ಯೆಗೆ ಶರಣಾದ ಘಟನೆ ಮೈಸೂರು ಜಿಲ್ಲೆ ಪಿರಿಯಾಪಟ್ಟಣ ತಾಲೂಕಿನ ಮುತ್ತಿನಮುಳ್ಳು ಸೋಗೆ ಗ್ರಾಮದಲ್ಲಿ ನಡೆದಿದೆ.
ಏನಿದು ಘಟನೆ
ಮುತ್ತಿನಮುಳ್ಳು ಸೋಗೆ ಗ್ರಾಮದ ಶ್ವೇತಾ ಎಂಬ ಯುವತಿಯನ್ನು ಪ್ರಸನ್ನ ಮದುವೆಯಾಗಿದ್ದನು. ಮೊದ ಮೊದಲು ಇಬ್ಬರು ಚೆನ್ನಾಗಿಯೇ ಇದ್ದರು. ಆದರೆ ಬರು ಬರುತ್ತಾ ಗಂಡನಿಗೆ ಹೆಂಡತಿ ಮೇಲೆ ಅನುಮಾನ ಶುರುವಾಗಿದೆ. ಹೆಂಡ್ತಿ ಮೇಲೆ ಅನುಮಾನ ಪಟ್ಟು ದೈಹಿಕ ಹಾಗೂ ಮಾನಸಿಕ ಹಿಂಸೆ ನೀಡುತ್ತಿದ್ದನು.
ಗಂಡ-ಹೆಂಡಿರ ಕಲಹ ಹಲವು ಬಾರಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು ಇದೆ. ನಂತರ ಪೊಲೀಸರು ಇಬ್ಬರ ನ್ನು ಕೂರಿಸಿ ಸಮಾಧಾನ ಮಾಡಿ ಕಳುಹಿಸಿದ್ದರು. ಆದರೆ ಪತಿ ಮಾತ್ರ ತನ್ನ ಚಾಳಿ ಬಿಟ್ಟಿರಲಿಲ್ಲ. ಇಷ್ಟೇ ಅಲ್ಲದೇ ಹೆಂಡತಿ ತಂಗಿ ಮೇಲೆ ಕೂಡ ಆಕೆ ಆಸೆ ಪಟ್ಟಿದ್ದನು.
ಪತಿಯ ಕಿರುಕುಳಕ್ಕೆ ಬೇಸತ್ತ ಪತ್ನಿ ತವರು ಮನೆ ಸೇರಿದ್ದಳು. ಆದರೂ ಬಿಡದ ಕ್ರೂರಿ ಪತಿ ಅಲ್ಲಿಗೆ ಹೋಗಿ ಗಲಾಟೆ ಮಾಡಿದ್ದಾನೆ. ಚಾಕು ತೋರಿಸಿ ಗಲಾಟೆ ಮಾಡಿದ್ದಾನೆ, ಈ ವೇಳೆ ಮಾತಿಗೆ ಮಾತು ಬೆಳೆದು ಶ್ವೇತಾ ಹೊಟ್ಟೆಗೆ ಪತಿ ಚಾಕುವಿನಿಂದ 5 ಬಾರಿ ಇರಿದಿದ್ದಾನೆ. ನಂತರ ಗಾಬರಿಗೊಂಡ ಪತಿ ಓಡಿ ಹೋಗಿ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.ಸದ್ಯ ಶ್ವೇತಾಳ ಚೀರಾಟ ಕೇಳಿದ ಜನರು ಆಕೆಯನ್ನು ಆಸ್ಪತ್ರೆಗೆ ಸೇರಿದ್ದು, ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಈ ಸಂಬಂಧ ಪಿರಿಯಾಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.