ಇದು ನಂಬಲಸಾಧ್ಯವೆಂದು ತೋರಿದರೂ, ನೈಜ ಘಟನೆ. ನಂಬಲೇ ಬೇಕು. ಹೌದು, ಒಬ್ಬ ಮಹಿಳೆ ಸಹೋದರಿಯರಿಬ್ಬರನ್ನು ತನ್ನ ಕುಟುಂಬದ ಭಾಗವಾಗಿಸಿದ್ದು, ಒಬ್ಬ ಪುರುಷನ ಜೊತೆ ಮೂವರು ದಿನ ಸಾಗಿಸುತ್ತಿದ್ದಾರೆ.
ವೀಡಿಯೋದಲ್ಲಿರುವ ಮೊದಲ ಪತ್ನಿ ಕ್ರಿಸ್ಟಿನ್ ತನ್ನ ಪತಿ ಒಂಬೆನಿ ಪ್ರೀತಿಯನ್ನು ಹಂಚಿಕೊಳ್ಳುವುದು ಮಾತ್ರವಲ್ಲದೆ ತನ್ನ ಸಹೋದರಿಯರನ್ನು ತನ್ನ ಗಂಡನ ಎರಡನೇ ಮತ್ತು ಮೂರನೇ ಹೆಂಡತಿಯನ್ನಾಗಿ ಸ್ವೀಕರಿಸಿರುವುದು ಕಾಣಬಹುದು.
ಆಕೆ ಸಹೋದರಿಯರೊಂದಿಗೆ ಸಂತೋಷದಿಂದ ಒಟ್ಟಿಗೆ ವಾಸಿಸುತ್ತಿದ್ದು, ಮನೆಯಲ್ಲಿ ಸಹೋದರಿಯರ ಜಗಳವಾಗಲಿ ಜಟಾಪಟಿಯಾಗಲಿ ಇಲ್ಲ. ಅವರು ತಮ್ಮ ಪ್ರೀತಿಯನ್ನು ಪರಸ್ಪರ ಹಂಚಿಕೊಳ್ಳುತ್ತಾರೆ ಮತ್ತು ಅವರ ಗಂಡನ ಬಗ್ಗೆ ಯಾರಿಗೂ ದೂರುಗಳಿಲ್ಲವಂತೆ.
ಕ್ರಿಸ್ಟಿನ್ ಅವರು ತಮ್ಮ ನಡೆಯ ಬಗ್ಗೆ ಹೆಮ್ಮೆಪಡುತ್ತಾರೆ. ಅಷ್ಟೇ ಅಲ್ಲದೇ ಪತಿ ಪ್ರತಿಯೊಬ್ಬರ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಾರೆ, ಎಲ್ಲರನ್ನೂ ಸಮಾನವಾಗಿ ಪ್ರೀತಿಸುತ್ತಾರೆ, ಒಟ್ಟಿಗೇ ಒಂದು ಮನೆಯಲ್ಲಿ ನೆಮ್ಮದಿಯಿಂದ ಬದುಕುತ್ತಿದ್ದೇವೆಂದು ಹೇಳಿಕೊಂಡಿದ್ದಾರೆ.
ಒಂಬೆನಿ ಅವರು ಮೂರು ಹೆಂಡತಿಯರು ಮತ್ತು 10 ಮಕ್ಕಳೊಂದಿಗೆ ತಮ್ಮ ಕುಟುಂಬದೊಂದಿಗೆ ಕಚ್ಚಾ ಮನೆಯಲ್ಲಿ ವಾಸಿಸುತ್ತಿದ್ದಾರೆ. ಎಲ್ಲರ ಜವಾಬ್ದಾರಿಯನ್ನು ಒಂಬೆನಿ ಒಬ್ಬರೇ ನಿಭಾಯಿಸುತ್ತಾರೆ.
ಕಡು ಬಡತನದಲ್ಲಿ ಬದುಕುತ್ತಿರುವ ಇಷ್ಟು ದೊಡ್ಡ ಕುಟುಂಬವನ್ನು ನಿರ್ವಹಣೆ ಮಾಡಲು ಕಷ್ಟ ಪಡುತ್ತಿದ್ದರೂ ಎಲ್ಲರೂ ತೃಪ್ತರಾಗಿದ್ದಾರೆ ಎಂಬುದು ಅಚ್ಚರಿ