ಬೆಂಗಳೂರು : ಉಚಿತ ಮತ್ತು ಕಡ್ಡಾಯ ಶಿಕ್ಷಣಕ್ಕಾಗಿ ಮಕ್ಕಳ ಹಕ್ಕು ಕಾಯಿದೆ 2009ರ (ಆರ್ಟಿಐ) ಸೆಕ್ಷನ್ 12(1) (ಬಿ) ಮತ್ತು 12(1)(ಸಿ) ಅಡಿ, 2024-25ನೇ ಸಾಲಿಗೆ ಅನುದಾನಿತ ಮತ್ತು ಅನುದಾನ ರಹಿತ ಶಾಲೆಗಳಲ್ಲಿ ದಾಖಲಾತಿಗಾಗಿ ಆನ್ಲೈನ್ನಲ್ಲಿ ಪೋಷಕರು ಹೆಚ್ಚು ಅರ್ಜಿ ಸಲ್ಲಿಸಲು ಅವಕಾಶ ನೀಡುವ ಸಲುವಾಗಿ ಅರ್ಜಿ ಸಲ್ಲಿಕೆಗೆ ಮೇ, 20 ರವರೆಗೆ ವಿಸ್ತರಿಸಲಾಗಿದೆ.
ಇಲಾಖಾ ವೆಬ್ಸೈಟ್ http://www.schooleducation.karnataka.gov.in ರಲ್ಲಿ ಆಸಕ್ತ ಪೋಷಕರು ಅರ್ಜಿ ಸಲ್ಲಿಸಬಹುದು ಎಂದು ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ತಿಳಿಸಿದ್ದಾರೆ.