ಬುಧವಾರ-ಗುರುವಾರದ 24 ಗಂಟೆಗಳ ಅವಧಿಯಲ್ಲಿ 6,148 ಕೋವಿಡ್ ಸಂಬಂಧಿ ಸಾವುಗಳನ್ನು ದೇಶ ಕಂಡಿದೆ. ಇದು ಸಾಂಕ್ರಮಿಕ ಅಟಕಾಯಿಸಿಕೊಂಡ ಬಳಿಕ ಒಂದು ದಿನದಲ್ಲಿ ಕಂಡು ಬಂದ ಅತ್ಯಂತ ಹೆಚ್ಚಿನ ಸಂಖ್ಯೆಯ ಸಾವಾಗಿದೆ.
ಆದರೆ ಬಿಹಾರದಲ್ಲಿ ಇದೇ ಅವಧಿಯಲ್ಲಿ ಘಟಿಸಿದ 3,951 ಸಾವುಗಳನ್ನು ಪಟ್ಟಿಯಿಂದ ತೆಗೆದುಹಾಕಿದರೆ, ನಿನ್ನೆಯ ಒಟ್ಟಾರೆ ಸಾವುಗಳ ಪ್ರಮಾಣವು 2,197ಕ್ಕೆ ಇಳಿಯಲಿದೆ.
ಮಕ್ಕಳಿಗಾಗಿ ಕೋವಿಡ್ 19 ಮಾರ್ಗಸೂಚಿ ಬಿಡುಗಡೆ: ರೆಮ್‌ಡೆಸಿವಿರ್ ಬಳಸದಂತೆ ಸೂಚನೆ
ಬುಧವಾರದಂದು ಬಿಹಾರವು ತನ್ನ ಗಡಿಯೊಳಗೆ ಸಂಭವಿಸಿದ ಕೋವಿಡ್ ಸಂಬಂಧಿ ಸಾವುಗಳ ಪಟ್ಟಿಯನ್ನು ದೊಡ್ಡ ಮಟ್ಟದಲ್ಲಿ ಪರಿಷ್ಕರಿಸಿದ್ದು, ಅಲ್ಲಿನ ಆರೋಗ್ಯ ಇಲಾಖೆಯು ರಾಜ್ಯದಲ್ಲಿ ಘಟಿಸಿದ ಕೋವಿಡ್ ಸಾವುಗಳ ಒಟ್ಟಾರೆ ಸಂಖ್ಯೆಯನ್ನು 9,429 ಎಂದು ನಮೂದಿಸಿದೆ. ಈ ಪಟ್ಟಿಯನ್ನು ಪರಿಶೀಲನೆ ಮಾಡಿದ ನಂತರ, ಬುಧವಾರದಂದು, 3,951 ಸಾವುಗಳನ್ನು ದಾಖಲಿಸಲಾಗಿದೆ.
ಸಂಸದೆ ನುಸ್ರತ್ – ನಿಖಿಲ್ ವಿಚ್ಛೇದನಕ್ಕೆ ಕಾರಣರಾದ್ರಾ ಯಶ್ ದಾಸ್‌ಗುಪ್ತಾ…?
ಈ 3,951 ಸಾವುಗಳ ಪೈಕಿ ಬಹುತೇಕ ಕೋವಿಡ್ ಎರಡನೇ ಅಲೆಯುದ್ದಕ್ಕೂ ಘಟಿಸಿವೆ. ಜೂನ್ 7ರವರೆಗೂ ಬಿಹಾರದಲ್ಲಿ ಕೋವಿಡ್‌ನಿಂದ ಮೃತಪಟ್ಟರ ಸಂಖ್ಯೆ 5,424 ಎಂದು ದಾಖಲಾಗಿತ್ತು. ಕಳೆದ 24 ಗಂಟೆಗಳಲ್ಲಿ ಇನ್ನೂ 20 ಮಂದಿ ಕೋವಿಡ್‌ನಿಂದ ನಿಧನರಾಗಿದ್ದರು.
ಇದೀಗ ದೇಶದ ಎಲ್ಲಾ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶವಾರು ಕೋವಿಡ್ ಸಾವುಗಳ ಪಟ್ಟಿಯಲ್ಲಿ ಬಿಹಾರವು 17ನೇ ಸ್ಥಾನದಿಂದ 12ನೇ ಸ್ಥಾನಕ್ಕೆ ಜಿಗಿದಿದೆ. ಇದೇ ವೇಳೆ ಕೋವಿಡ್-19 ಸಂಬಂಧ ಸಾವುಗಳ ಪ್ರಮಾಣವು ಬಿಹಾರದಲ್ಲಿ 42.1%ರಷ್ಟಿದೆ ಎಂದು ಹೆಚ್ಚುವರಿ ಅಂಕಿ-ಅಂಶಗಳು ಸೂಚಿಸುತ್ತಿವೆ.