alex Certify ಹಾರುತ್ತಿರುವ ವಿಮಾನದಲ್ಲಿ ಹೆರಿಗೆಯಾದರೆ ಆ ಮಗು ಯಾವ ದೇಶದ ಪ್ರಜೆಯಾಗುತ್ತೆ….? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹಾರುತ್ತಿರುವ ವಿಮಾನದಲ್ಲಿ ಹೆರಿಗೆಯಾದರೆ ಆ ಮಗು ಯಾವ ದೇಶದ ಪ್ರಜೆಯಾಗುತ್ತೆ….?

ವಿಮಾನದಲ್ಲಿ ಸಂಚರಿಸುತ್ತಿರುವ ವೇಳೆ ಹೆರಿಗೆ ಆಗಿ ಮಗು ಜನಿಸಿದರೆ ಏನೆಲ್ಲಾ ಮಾಡಬೇಕಾಗುತ್ತದೆ ? ಇದೊಂದು ವಿಚಿತ್ರವಾದ ಪರಿಸ್ಥಿತಿಯಂತೆ ತೋರುತ್ತದೆಯಾದರೂ, ಇಂಥ ಅನೇಕ ಪ್ರಕರಣಗಳು ಅದಾಗಲೇ ಜರುಗಿವೆ. ಹೀಗೆ ಜನಿಸುವ ಮಗುವಿನ ಪೌರತ್ವದ ಬಗ್ಗೆ ಏನು ? ಎಂಬ ಪ್ರಶ್ನೆ ಸೇರಿದಂತೆ ಅನೇಕ ರೀತಿಯ ಪ್ರಶ್ನೆಗಳು ನಿಮ್ಮಲ್ಲಿ ಈ ವಿಚಾರವಾಗಿ ಉದ್ಭವಿಸಬಹುದು.

ಒಂದು ವೇಳೆ ಭಾರತದಿಂದ ಅಮೆರಿಕಗೆ ವಿಮಾನದಲ್ಲಿ ಹಾರುತ್ತಿರುವ ವೇಳೆ ಮಗು ಜನಿಸಿದೆ ಎಂದು ಭಾವಿಸೋಣ. ಹಾಗೆ ಜನಿಸಿದ ಮಗು ಭಾರತದ ಪ್ರಜೆಯೇ ಅಥವಾ ಅಮೆರಿಕನ್ ಪ್ರಜೆಯೇ? ಇಂಥ ಪ್ರಶ್ನೆಗಳಿಗೆ ಇಲ್ಲಿ ಉತ್ತರಗಳಿವೆ.

ನಿಮ್ಮ ಮನೆಯ ʼಅಡುಗೆ ಕೋಣೆʼ ಬಗ್ಗೆ ವಾಸ್ತು ಶಾಸ್ತ್ರ ಏನು ಹೇಳುತ್ತದೆ ಗೊತ್ತಾ….?

ಈ ಪರಿಸ್ಥಿತಿಯ ಸಂಭಾವ್ಯತೆ ಎಷ್ಟು ?

ಇಂಥ ಘಟನೆಗಳು ಬಹಳ ವಿರಳವಾಗಿ ಘಟಿಸುತ್ತವೆ. ಆದರೆ ಅಂಕಿಅಂಶಗಳು ಏನು ಹೇಳುತ್ತವೆ ? ಒಂದು ವರದಿಯ ಪ್ರಕಾರ, ಫ್ಲೈಟ್‌ನಲ್ಲಿ ಹಾರುವ ಪ್ರತಿ ಇಪ್ಪತ್ತಾರು ಮಿಲಿಯನ್ ಪ್ರಯಾಣಿಕರಲ್ಲಿ ಒಬ್ಬರು ಹಾರುವ ಸಮಯದಲ್ಲಿ ಹೆರಿಗೆಗೆ ಒಳಗಾಗುತ್ತಾರೆ.

ಜನಿಸುವ 3,50,000 ರಿಂದ 4,00,000 ಶಿಶುಗಳಲ್ಲಿ ಸಾಮಾನ್ಯವಾಗಿ 50 ಶಿಶುಗಳು “ಆಕಾಶದಲ್ಲಿ ಜನಿಸುತ್ತವೆ”. ಅಕಾಲಿಕ ಜನನಕ್ಕೆ ಒಳಗಾಗುವ ಶಿಶುಗಳಿಂದಾಗಿ ಈ ಸಂದರ್ಭಗಳು ಉದ್ಭವವಾಗುತ್ತವೆ. ತಂತಮ್ಮ ಹಾರಾಟ ನೀತಿಗಳ ಮೂಲಕ ಏರ್‌ಲೈನ್ ಸಂಸ್ಥೆಗಳು ಇಂಥ ಸಂಭಾವ್ಯತೆಗಳಿಗೆ ಕಡಿವಾಣ ಹಾಕಲು ಯತ್ನಿಸಿದರೂ ಕೆಲವೊಮ್ಮೆ ಇಂಥ ಅನಿರೀಕ್ಷಿತ ಘಟನೆಗಳು ಸಂಭವಿಸಿಬಿಡುತ್ತವೆ.

ಭಾರತೀಯ ಮೂಲದ ಇಂಡಿಗೋ ಮತ್ತು ಏರ್ ಇಂಡಿಯಾದ ವಿಮಾನಗಳಲ್ಲಿ ಸಂಚರಿಸುವ ಜನರಿಗೆ ಸಹ ಈ ರೀತಿಯ ಹೆರಿಗೆಗಳಾದ ವರದಿಗಳಿವೆ. ಇಂಥ ಸಂದರ್ಭಗಳು ಸಂಭವಿಸಿದಾಗ, ಸಾಮಾನ್ಯವಾಗಿ, ಫ್ಲೈಟ್ ಅಟೆಂಡೆಂಟ್‌ಗಳು ಪರಿಸ್ಥಿತಿಯನ್ನು ನೋಡಿಕೊಳ್ಳುತ್ತಾರೆ ಮತ್ತು ವಿಮಾನದಲ್ಲಿ ಯಾರಾದರೂ ವೈದ್ಯರು ಪ್ರಯಾಣಿಸುತ್ತಿದ್ದರೆ ಮೊದಲು ಅವರ ಸಹಾಯ ಪಡೆಯಲು ಪ್ರಯತ್ನಿಸುತ್ತಾರೆ. ಇಂಥ ಸಂದರ್ಭಗಳಲ್ಲಿ, ಗರ್ಭಿಣಿ ಮಹಿಳೆಗೆ ಅಗತ್ಯವಿರುವ ಶುಶ್ರೂಷೆ ನೀಡಲು ವಿಮಾನವನ್ನೇ ಡೈವರ್ಟ್ ಮಾಡಿಬಿಡುವ ಅವಕಾಶವೂ ಇರುತ್ತದೆ.

ಫೆಬ್ರವರಿ 2020ರಲ್ಲಿ ಆಗಸದಲ್ಲಿ ಹಾರುತ್ತಿದ್ದ ವಿಮಾನವೊಂದರಲ್ಲಿ ಮಗು ಜನಿಸಿದ ಘಟನೆಯಿಂದ ಈ ವಿಚಾರ ಇನ್ನಷ್ಟು ಹೆಚ್ಚಾಗಿ ಅರ್ಥವಾಗುತ್ತದೆ. ಬ್ಯಾಂಕಾಕ್‌ಗೆ ಹೋಗುತ್ತಿದ್ದ ಕತಾರ್ ಏರ್‌ವೇಸ್ ವಿಮಾನವೊಂದರಲ್ಲಿ ಅವಧಿಪೂರ್ವವಾಗಿ ಮಗುವೊಂದು ಜನಿಸಿದಾಗ ತುರ್ತು ವೈದ್ಯಕೀಯ ನೆರವು ಪಡೆಯಲೆಂದು ವಿಮಾನವನ್ನು ಕೋಲ್ಕತ್ತಾದಲ್ಲಿ ಇಳಿಸಬೇಕಾಗಿ ಬಂದಿತ್ತು

ಹೀಗೆ ಜನಿಸುವ ಮಕ್ಕಳ ಪೌರತ್ವದ ಕಥೆ ಏನು ?

ನವಜಾತ ಶಿಶುವಿಗೆ ಪ್ರಯೋಜನಗಳನ್ನು ನೀಡುವ ಮೂಲಕ ವಿಮಾನಯಾನ ಸಂಸ್ಥೆಗಳು ಸಾಮಾನ್ಯವಾಗಿ ಇಂಥ ಡೆಲಿವರಿ ಸಂದರ್ಭಗಳನ್ನು ಆಚರಿಸುತ್ತವೆ. ಆದರೂ ಸಹ ಹೀಗೆ ಜನಿಸುವ ಮಗುವಿನ ಪೌರತ್ವದ ಬಗ್ಗೆ ಕೆಲವೊಂದು ಗೊಂದಲಗಳು ಉದ್ಭವಿಸಿದರೂ ಸಹ ಈ ಸಂಬಂಧ ಇರುವ ಕೆಲವು ನಿಯಮಗಳು ಗೊಂದಲಮಯ ಪರಿಸ್ಥಿತಿಯನ್ನು ಪರಿಹರಿಸುತ್ತವೆ.

ವಿಮಾನದಲ್ಲಿ ಮಗು ಜನಿಸಿದರೆ, ಜನನದ ಸಮಯದಲ್ಲಿ ವಿಮಾನವು ಇದ್ದ ರಾಷ್ಟ್ರದ ವಾಯುಪ್ರದೇಶ ಅಥವಾ ಪೋಷಕರ ರಾಷ್ಟ್ರೀಯತೆಯನ್ನು ಗಮನದಲ್ಲಿಟ್ಟುಕೊಂಡು ಆ ಮಗುವಿನ ರಾಷ್ಟ್ರೀಯತೆ ನಿರ್ಧರಿಸಲಾಗುತ್ತದೆ. ಈ ಎರಡೂ ಅಂಶಗಳು ಮೇಲ್ಕಂಡ ಪ್ರಶ್ನೆಗೆ ಪರಿಹಾರ ಒದಗಿಸದಿದ್ದರೆ, ಹೆರಿಗೆ ಸಂಭವಿಸಿದ ವಿಮಾನವನ್ನು ನೋಂದಾಯಿಸಿದ ರಾಷ್ಟ್ರದ ಆಧಾರದ ಮೇಲೆ ಮಗುವಿಗೆ ಪೌರತ್ವ ನೀಡಲಾಗುತ್ತದೆ.

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...