ದೇಶದ ಪ್ರತಿಷ್ಟಿತ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಗ್ರಾಹಕರಿಗೆ ಆನ್ಲೈನ್ ಬ್ಯಾಂಕಿಂಗ್ ಸೇವೆಯ ಮೂಲಕ ಸಾಕಷ್ಟು ಸೌಕರ್ಯಗಳನ್ನು ನೀಡುತ್ತಿದೆ.
ಆನ್ಲೈನ್ ಬ್ಯಾಂಕಿಂಗ್ ಬಳಕೆಯ ಮೂಲಕ ಬ್ಯಾಂಕ್ಗೆ ಭೇಟಿ ನೀಡುವುದನ್ನ ಕಡಿಮೆ ಮಾಡಬಹುದಾಗಿದೆ. ಎಸ್.ಬಿ.ಐ. ಇಂಟರ್ನೆಟ್ ಬ್ಯಾಂಕಿಂಗ್ಗೆ ಆನ್ಲೈನ್ ರಿಜಿಸ್ಟ್ರೇಷನ್ ಆಗುವ ಬಗ್ಗೆ ಇಲ್ಲಿದೆ ಮಾಹಿತಿ :
ಇಂಟರ್ನೆಟ್ ಬ್ಯಾಂಕಿಂಗ್ ಸೌಲಭ್ಯವನ್ನು ಪಡೆಯಲು ಗ್ರಾಹಕರು ಎಸ್ಬಿಐನಲ್ಲಿ ಕನಿಷ್ಟ 1 ಬ್ಯಾಂಕ್ ಖಾತೆಯನ್ನು ಹೊಂದಿರಬೇಕು.
– ಎಸ್ಬಿಐ ಹೋಂ ಪೇಜ್ನಲ್ಲಿ ಪರ್ಸನಲ್ ಬ್ಯಾಂಕಿಂಗ್ ವಿಭಾಗಕ್ಕೆ ಹೋಗಿ.
– ಇದರಲ್ಲಿ ನ್ಯೂ ಯೂಸರ್ ರಿಜಿಸ್ಟ್ರೇಷನ್ ಲಿಂಕ್ ಮೇಲೆ ಕ್ಲಿಕ್ ಮಾಡಿ.
– ಹೊಸ ನೋಂದಣಿಯಾಗಿ, ನ್ಯೂ ಯೂಸರ್ ರೆಜಿಸ್ಟ್ರೇಷನ್ ಮೇಳೆ ಕ್ಲಿಕ್ ಮಾಡಿ.
– ನ್ಯೂ ಯೂಸರ್ ರಿಜಿಸ್ಟ್ರೇಷನ್ನಲ್ಲಿ ಕಂಟಿನ್ಯೂ ಆಯ್ಕೆ ಕ್ಲಿಕ್ ಮಾಡಿ.
– ನಿಮ್ಮ ಪಾಸ್ಬುಕ್ನಲ್ಲಿರುವ ಸಿಐಎಫ್ ಸಂಖ್ಯೆಯನ್ನು ನಮೂದಿಸಿ. ಹಾಗೆಯೇ ಬ್ರ್ಯಾಂಚ್ ಕೋಡನ್ನೂ ನಮೂದಿಸಿ.
– ನಿಮ್ಮ ರಿಜಿಸ್ಟರ್ ಮೊಬೈಲ್ ನಂಬರ್ನ್ನು ನಮೂದಿಸಿ.
– ಇಂಟರ್ನೆಟ್ ಬ್ಯಾಂಕಿಂಗ್ ಸೌಲಭ್ಯಗಳನ್ನು ಆಯ್ಕೆ ಮಾಡಿಕೊಳ್ಳಿ.
– ಕ್ಯಾಪ್ಚಾ ಕೋಡ್ ಹಾಕಿ ಬಳಿಕ ಸಬ್ಮಿಟ್ ಆಯ್ಕೆ ಒತ್ತಿರಿ.
– ನಿಮ್ಮ ಬಳಿ ಎಟಿಎಂ ಕಾರ್ಡ್ ಇದ್ದಲ್ಲಿ ನೀವು ರಿಜಿಸ್ಟ್ರೇಷನ್ ಪೂರ್ತಿ ಮಾಡಿ ಹಾಗೂ ಇಂಟರ್ನೆಟ್ ಬ್ಯಾಂಕಿಂಗ್ ಸೇವೆಯನ್ನು ಬಳಸಬಹುದಾಗಿದೆ.