alex Certify ಟಿ- 20 ವಿಶ್ವಕಪ್ ತಂಡದಲ್ಲಿರದಿದ್ದರೂ ಶಿಖರ್‌ ಧವನ್‌ ಗೆ ಇನ್ನೂ ಇದೆ ಅವಕಾಶ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಟಿ- 20 ವಿಶ್ವಕಪ್ ತಂಡದಲ್ಲಿರದಿದ್ದರೂ ಶಿಖರ್‌ ಧವನ್‌ ಗೆ ಇನ್ನೂ ಇದೆ ಅವಕಾಶ

ಟಿ 20 ವಿಶ್ವಕಪ್‌ಗೆ ಬಿಸಿಸಿಐ ಬುಧವಾರ ಭಾರತ ತಂಡವನ್ನು ಅಂತಿಮಗೊಳಿಸಿದೆ. ಆದರೆ ಓಪನರ್ ಶಿಖರ್ ಧವನ್ ಹೆಸರನ್ನು ಆಯ್ಕೆ ಸಮಿತಿ ಕೈಬಿಟ್ಟು ಅಚ್ಚರಿ ಮೂಡಿಸಿದೆ.

ಅಂತಿಮ 15 ಮಂದಿಯ ತಂಡದಲ್ಲಿ ಧವನ್ ಸೇರಿಸಿಕೊಂಡಿಲಿಲ್ಲ. ಎಡಗೈ ಬ್ಯಾಟ್ಸಮನ್ ಆದ ಧವನ್, ಕೇವಲ ಎರಡು ತಿಂಗಳ ಹಿಂದೆಯಷ್ಟೇ ಭಾರತ ತಂಡದಲ್ಲಿ ಆಡಿದ್ದರು. ಆದರೆ ವಿಶ್ವಕಪ್ ಸ್ಪರ್ಧೆಯ ವೇಳೆಗೆ ಇವರನ್ನು ಪರಿಗಣಿಸಿಲ್ಲ.

2013ರಿಂದ ನಿರಂತರವಾಗಿ ತಂಡದಲ್ಲಿ ಇದ್ದ ಧವನ್ ಹಿರಿಯ ಆಟಗಾರ ಎನಿಸಿಕೊಂಡಿದ್ದಾರೆ. ಆದರೆ ವಿಶ್ವಕಪ್ ಟೂರ್ನಿಯಲ್ಲಿ ಹಿರಿಯ ಆಟಗಾರನಿಲ್ಲದ್ದು ಅನೇಕರಿಗೆ ಅಚ್ಚರಿ ಮೂಡಿಸಿದೆ. ಧವನ್ ಬದಲಾಗಿ ತಂಡದಲ್ಲಿ ಯಾರನ್ನು ತೆಗೆದುಕೊಂಡಿಲ್ಲ ಎಂಬುದೇ ಅಚ್ಚರಿ ಸಂಗತಿ. ತಂಡದಲ್ಲಿ ರೋಹಿತ್ ಶರ್ಮ ಮತ್ತು ಕೆ.ಎಲ್. ರಾಹುಲ್ ಅವರನ್ನು ಪ್ರಾರಂಭಿಕ ಆಟಗಾರರಾಗಿ ಆಯ್ಕೆ ಮಾಡಲಾಗಿದೆ.

ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಆಯ್ಕೆ ಸಮಿತಿ ಅಧ್ಯಕ್ಷ ಚೇತನ್ ಶರ್ಮ, ಶಿಖರ್ ಧವನ್ ಕೈಬಿಟ್ಟ ಬಗ್ಗೆ ಹೆಚ್ಚಿಗೆ ಹೇಳಲಾರೆ. ಈತ ಅತ್ಯಂತ ಪ್ರಮುಖ ಆಟಗಾರ. ಸದ್ಯಕ್ಕೆ ಅವರಿಗೆ ವಿಶ್ರಾಂತಿ ಬೇಕಿದೆ” ಎಂದಷ್ಟೇ ತಿಳಿಸಿದರು.

BIG NEWS: ಕಲಬುರ್ಗಿ ಮೇಯರ್ ಸ್ಥಾನಕ್ಕಾಗಿ ಜೆಡಿಎಸ್ ತಂತ್ರ; ದಳಪತಿಗಳ ಗೇಮ್ ಪ್ಲಾನ್ ಗೆ ಶಾಕ್ ಆದ ಕಾಂಗ್ರೆಸ್ – ಬಿಜೆಪಿ

ವಿಶ್ವಕಪ್ ತಂಡದಲ್ಲಿಲ್ಲದ ಧವನ್ ಅವರ ಟಿ20 ವೃತ್ತಿ ಜೀವನ ಮುಗಿಯಿತೆಂದು ಅಂದುಕೊಂಡರೆ ತಪ್ಪಾಗುತ್ತದೆ. ಐಪಿಎಲ್ 2021ರ ವೇದಿಕೆಯಲ್ಲಿ ಮತ್ತೆ ಧವನ್ ಅಬ್ಬರ ನೋಡಬಹುದು.

ಪ್ರಸ್ತುತ ಧವನ್ ಹೆಸರು ಟಿ 20 ತಂಡದಲ್ಲಿ ಇರದಿದ್ದರೂ, ಆಯ್ಕೆ ಸಮಿತಿ ಅಕ್ಟೊಬರ್ 10ರ ವರೆಗೆ ತಂಡದ ಹೆಸರುಗಳನ್ನು ಪರಿಷ್ಕರಿಸುವ ಸಾಧ್ಯತೆ ಇದೆ. ಸೆಪ್ಟೆಂಬರ್ 19ರಿಂದ ಐಪಿಎಲ್ ಪಂದ್ಯ ನಡೆಯುತ್ತಿದ್ದು, ಇಲ್ಲಿ ಭಾಗವಹಿಸುವ ಆಟಗಾರರ ಪ್ರದರ್ಶನದ ಮೇಲೂ ಅವಲಂಬಿತವಾಗಿರುತ್ತದೆ. ಇದಲ್ಲದೆ ಯುಜ್ವೇಂದ್ರ ಚಹಲ್ ಕೂಡ ಇದೆ ರೀತಿ ತಂಡ ಸೇರಿಸಿಕೊಳ್ಳುವ ಸಾಧ್ಯತೆಯೂ ಇದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...