ನವದೆಹಲಿ: ಡಿಎಲ್, ಎಲ್.ಎಲ್.ಆರ್. ಲೈಸೆನ್ಸ್ ಅವಧಿಯನ್ನು ಫೆಬ್ರವರಿ 29 ರವರೆಗೆ ವಿಸ್ತರಿಸಲಾಗಿದೆ. ಸಾರಥಿ ಪೋರ್ಟಲ್ ನಲ್ಲಿ ಮೂಲಸೌಕರ್ಯ ಸಂಬಂಧ ಸಮಸ್ಯೆ ಉಂಟಾದ ಕಾರಣ ವಾಹನ ಕಲಿಕಾ ಪರವಾನಿಗೆ, ಚಾಲನಾ ಪರವಾನಿಗೆ, ಕಂಡಕ್ಟರ್ ಪರವಾನಿಗೆ ಮಾನ್ಯತೆಯನ್ನು 2024ರ ಫೆಬ್ರವರಿ 29 ರವರೆಗೆ ವಿಸ್ತರಿಸಿ ಕೇಂದ್ರ ರಸ್ತೆ ಸಾರಿಗೆ ಹೆದ್ದಾರಿ ಸಚಿವಾಲಯ ಆದೇಶ ಹೊರಡಿಸಿದೆ.
ಜನವರಿ 31, 2024, ಫೆಬ್ರವರಿ 15, 2024ರ ನಡುವೆ ಮುಕ್ತಾಯಗೊಂಡ ಪರವಾನಿಗೆ ಸಿಂಧುತ್ವವನ್ನು ಫೆಬ್ರವರಿ 29 2024 ರವರೆಗೆ ಯಾವುದೇ ದಂಡ ವಿಧಿಸದೆ ಮಾನ್ಯವೆಂದು ಪರಿಗಣಿಸಲಾಗುವುದು ಎಂದು ಹೇಳಲಾಗಿದೆ.