alex Certify ‌ʼನಿಯೋಕೋವ್ʼ ಆತಂಕದಲ್ಲಿದ್ದವರಿಗೆ ತಜ್ಞರಿಂದ ಭರ್ಜರಿ ಗುಡ್‌ ನ್ಯೂಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‌ʼನಿಯೋಕೋವ್ʼ ಆತಂಕದಲ್ಲಿದ್ದವರಿಗೆ ತಜ್ಞರಿಂದ ಭರ್ಜರಿ ಗುಡ್‌ ನ್ಯೂಸ್

ನಿಯೋಕೋವ್ ಮಾನವರಿಗೆ ಮತ್ತೊಂದು ಸಂಕಷ್ಟ ಒಡ್ಡಬಹುದೆಂದು ಚೀನಾದ ಸಂಶೋಧಕರು ಇತ್ತೀಚಿಗೆ ಹೇಳಿದ್ದಾರೆ. ಇದನ್ನ ಅಲ್ಲಗೆಳೆದಿರುವ ಜಗತ್ತಿನ ಹಲವು ಸಂಶೋಧಕರು ನಿಯೋಕೋವ್ ಸಧ್ಯಕ್ಕಿರುವ ಸ್ಥಿತಿಯಲ್ಲಿ ಮಾನವ ಸಂತತಿಗೆ ಯಾವುದೇ ತೊಂದರೆ ಇಲ್ಲ ಎಂದಿದ್ದಾರೆಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.

ನಿಯೋಕೋವ್ ವಾಸ್ತವವಾಗಿ ಹಳೆಯ ವೈರಸ್ (ಬಾವಲಿಗಳಲ್ಲಿ 2011 ರಲ್ಲಿ ಗುರುತಿಸಲಾಗಿದೆ) ಎಂದು ಮಹಾರಾಷ್ಟ್ರ ರಾಜ್ಯ ಟಾಸ್ಕ್ ಫೋರ್ಸ್ ಸದಸ್ಯ ಡಾ ಶಶಾಂಕ್ ಜೋಶಿ ತಿಳಿಸಿದ್ದಾರೆ.‌ ಈ ವೈರಸ್ ಜೀವಕೋಶಗಳಿಗೆ ಪ್ರವೇಶಿಸಲು DPP4 ಗ್ರಾಹಕಗಳನ್ನು ಬಳಸುವ MERS CoV ಗೆ ನಿಕಟ ಸಂಬಂಧ ಹೊಂದಿದೆ. ನಿಯೋಕೋವ್ ಬಾವಲಿಗಳ ACE2 ಗ್ರಾಹಕಗಳನ್ನು ಬಳಸಬಹುದು, ಆದರೆ ಹೊಸ ರೂಪಾಂತರ ಸಂಭವಿಸದ ಹೊರತು ಮಾನವನ ACE2 ಗ್ರಾಹಕಗಳನ್ನು ಬಳಸಲಾಗುವುದಿಲ್ಲ. ಇದರ ಬಗ್ಗೆ ಹೇಳುತ್ತಿರುವ ಎಲ್ಲಾ ಅಂಶಗಳು ಪ್ರಚೋದನೆಯಾಗಿವೆ ಅಷ್ಟೇ ಎಂದು ಡಾ ಜೋಶಿ ಹೇಳಿದ್ದಾರೆ.‌

ಝೂನೋಟಿಕ್ ಸ್ಪಿಲ್ ಓವರ್ ನಿಂದ ಪ್ರಾಣಿಗಳಿಂದ ಮನುಷ್ಯರಿಗೆ ವೈರಸ್ ಹರಡುತ್ತದೆ. ಆದರೆ ಇದು ಅಪರೂಪದಲ್ಲೆ ಅಪರೂಪದ ಘಟನೆ.‌ ಹೀಗಾಗಿ, ನಿಯೋಕೋವ್ ವೈರಸ್ ತನ್ನ ನೈಸರ್ಗಿಕ ರೂಪದಲ್ಲಿ, ಮನುಷ್ಯರ ದೇಹ ಸೇರಲು ಸಾಧ್ಯವಿಲ್ಲ.‌ ನಿಯೋಕೋವ್ ಕೂಡ ‘ಹೊಸ’ ವೈರಸ್ ಅಲ್ಲ ಎಂದು ದೆಹಲಿ ಮೂಲದ CSIR-IGIB ಯ ಪ್ರಧಾನ ವಿಜ್ಞಾನಿ ವಿನೋದ್ ಸ್ಕಾರಿಯಾ ತಿಳಿಸಿದ್ದಾರೆ.‌

ನಿಯೋಕೋವ್ ಒಂದು ರೀತಿಯ ಬಾವಲಿಯಲ್ಲಿ ಕಂಡುಬಂದಿದೆ. 2012 ರಲ್ಲಿ ಒಂಟೆಗಳ ಮೂಲಕ ಮಾನವರಲ್ಲಿ ಹೊರಹೊಮ್ಮಿದೆ. ನಿಯೋಕೋವ್ ವೈರಸ್ ನ ಅನುವಂಶಿಕ ಸಂಯೋಜನೆ MERS COV ಗೆ ಹತ್ತಿರದಲ್ಲಿದೆ. MERS ಸೋಂಕು ಅಷ್ಟು ಸುಲಭವಾಗಿ ಮನುಷ್ಯರಲ್ಲಿ ಹರಡುವುದಿಲ್ಲ.‌ ನಿಯೋಕೋವ್ ಬ್ಯಾಟ್ ACE2 ಗ್ರಾಹಕವನ್ನ ಬಳಸುತ್ತದೆ ಆದರೆ ಮಾನವ ACE2 ಗ್ರಾಹಕವಲ್ಲ. ಆದ್ದರಿಂದ ಈ ವೈರಸ್ ಮನುಷ್ಯರಲ್ಲಿ ಹರಡಲು ಸಾಧ್ಯವಿಲ್ಲ.‌ ಆದರೂ ಭವಿಷ್ಯದಲ್ಲಿ ಏನಾಗಬಹುದು ಎಂದು ತಿಳಿದುಕೊಳ್ಳುವುದು ಒಳ್ಳೆಯದು. ಸುಮಾರು 3000ಕ್ಕು ಹೆಚ್ಚು ಬಾವಲಿಗಳಲ್ಲಿ ಕೊರೋನಾ ವೈರಸ್ ಇರುವುದು ತಿಳಿದುಬಂದಿದೆ, ಹೀಗಿರುವಾಗ ಭವಿಷ್ಯದಲ್ಲಿ ಸ್ಪಿಲ್ ಓವರ್ ಆಗಲೂಬಹುದು ಇದಕ್ಕೆ ನಾವು ಸಿದ್ಧರಿರಬೇಕು ಎಂದು ವೈರಾಲಜಿಸ್ಟ್ ಡಾ. ಶಾಹಿದ್ ಜಮೀಲ್ ತಿಳಿಸಿದ್ದಾರೆ.‌

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...