![Experts say Bean-shaped Structure in Arabian Sea Could be a Plankton Assemblage](https://images.news18.com/ibnlive/uploads/2021/06/1624174901_untitled-design-2021-06-20t130710.032.png)
ಕೇರಳದ ಕೊಚ್ಚಿ ಬಳಿ ಅರಬ್ಬೀ ಸಮುದ್ರದಲ್ಲಿ ಹುರುಳಿಕಾಯಿ ಆಕಾರದ ರಚನೆಯೊಂದು ಗೂಗಲ್ ಮ್ಯಾಪ್ಸ್‌ನಲ್ಲಿ ಕಂಡಾಗಿನಿಂದ ಭಾರೀ ಚರ್ಚೆಗಳು ಆರಂಭಗೊಂಡಿದ್ದವು.
ಫ್ಲಾಂಕ್ಟನ್ ಎಂಬ ಜಲಚರ ಕ್ರಿಮಿಗಳು ಸೇರಿಕೊಂಡು ಹೀಗೆ ಆಗಿದೆ ಎಂದು ಅನೇಕ ತಜ್ಞರು ಅಭಿಪ್ರಾಯಪಟ್ಟಿದ್ದರು.
BIG BREAKING: ರಾಜಧಾನಿಯಲ್ಲಿ 1 ಸಾವಿರದೊಳಗೆ ಹೊಸ ಕೇಸ್, ಬೆಂಗಳೂರು ಸೇರಿ ರಾಜ್ಯದಲ್ಲಿಂದು ಕೊರೋನಾ ಭಾರೀ ಇಳಿಕೆ- ಇಲ್ಲಿದೆ ಜಿಲ್ಲೆಗಳ ಮಾಹಿತಿ
“ದೊಡ್ಡ ಮಟ್ಟದಲ್ಲಿ ಪ್ಲಾಂಕ್ಟನ್‌ಗಳು ಒಂದೆಡೆ ಸೇರಿರುವ ಸಾಧ್ಯತೆ ಇದ್ದು, ಇವುಗಳ ಈ ದೈತ್ಯ ರಚನೆಯನ್ನು ಉಪಗ್ರಹದ ಮೂಲಕ ಸೆರೆ ಹಿಡಿದಿರುವ ಸಾಧ್ಯತೆ ಇದೆ. ಅಲ್ಲದೇ ಅಲ್ಲೆಲ್ಲಾ ಮಣ್ಣು ಸೇರಿಕೊಂಡಿರುವ ಕುರಿತಂತೆ ನಾನು ಯಾವುದೇ ವರದಿಗಳನ್ನು ನೋಡಿಲ್ಲ” ಎಂದು ಕೇರಳ ಮೀನುಗಾರಿಕೆ ಹಾಗೂ ಸಾಗರಿಕ ಅಧ್ಯಯನ ವಿವಿಯ ಸಂಶೋಧನಾ ವಿಭಾಗದ ಮಾಜಿ ನಿರ್ದೇಶಕ ಕೆ.ವಿ. ಜಯಚಂದ್ರನ್ ತಿಳಿಸಿದ್ದಾರೆ.
ನಾಳೆಯಿಂದ ದೇಶಾದ್ಯಂತ ಉಚಿತ ಲಸಿಕೆ ಅಭಿಯಾನ, ಕೋ-ವಿನ್‌ನಲ್ಲಿ ಪೂರ್ವ ನೋಂದಣಿ ಕಡ್ಡಾಯವಲ್ಲ..!
“ಸೂಕ್ತ ಅಧ್ಯಯನ ಹಾಗೂ ಕುಫೋಸ್ ಹಾಗೂ ಕೊಚ್ಚಿಯ ವಿಜ್ಞಾನ ಹಾಗೂ ತಾಂತ್ರಿಕ ವಿವಿಗಳಂಥ ಏಜೆನ್ಸಿಗಳು ಮಾತ್ರವೇ ಇದೇನೆಂದು ತಿಳಿಸಬಲ್ಲವು” ಎಂದು ಜಯಚಂದ್ರನ್ ಹೇಳಿದ್ದಾರೆ.