ಕೊರೊನಾ ವೈರಸ್ ಎರಡನೇ ಅಲೆ ಹೆಚ್ಚು ಅಪಾಯಕಾರಿಯಾಗಿದೆ. ಒಮ್ಮೆ ಸೋಂಕಿಗೊಳಗಾದವರಿಗೆ ಮತ್ತೆ ವೈರಸ್ ತಗಲುವ ಅಪಾಯವಿದೆ. ಹಾಗಾಗಿ ಜನರು ಹೆಚ್ಚು ಎಚ್ಚರಿಕೆ ವಹಿಸಬೇಕಾಗಿದೆ. ಕೊರೊನಾ ಸೋಂಕಿಗೊಳಗಾದ ವ್ಯಕ್ತಿಗಳು ಕೆಲವೊಂದು ಮುಂಜಾಗ್ರತೆ ಕ್ರಮಗಳನ್ನು ಪಾಲಿಸಬೇಕಾಗುತ್ತದೆ.
ಕೊರೊನಾದಿಂದ ಚೇತರಿಸಿಕೊಂಡ ವ್ಯಕ್ತಿಗಳು ಹಲ್ಲುಜ್ಜುವ ಬ್ರಷ್ ಬದಲಿಸಬೇಕು. ಯಸ್. ಇದು ನಿಮಗೆ ವಿಚಿತ್ರವೆನಿಸಬಹುದು. ಆದ್ರೆ ಇದು ಸತ್ಯ. ಕೊರೊನಾ ನೆಗೆಟಿವ್ ಬರ್ತಿದ್ದಂತೆ ಬ್ರಷ್ ಬದಲಿಸಿ. ಹಳೆ ಬ್ರಷ್ ನಲ್ಲಿರುವ ವೈರಸ್ ಮತ್ತೆ ನಿಮ್ಮನ್ನು ಸೋಂಕಿಗೊಳಪಡಿಸಬಹುದು. ಹಾಗಾಗಿ ಬ್ರಷ್ ಬದಲಾಯಿಸುವುದು ಒಳ್ಳೆಯದು. ವಿಶ್ವ ಆರೋಗ್ಯ ಸಂಸ್ಥೆ ಮತ್ತು ಸರ್ಕಾರ ಹಲವಾರು ಮಾರ್ಗಸೂಚಿಗಳನ್ನು ಹೊರಡಿಸಿದೆ. ಈ ಮುನ್ನೆಚ್ಚರಿಕೆಗಳಲ್ಲಿ ಬ್ರಷ್ ಬದಲಿಸುವ ಸೂಚನೆ ನೀಡಲಾಗಿದೆ.
ಸಾಗರ ಖಾದ್ಯ ಪ್ರಿಯರಿಗೊಂದು ’ತಾಜಾ’ ಸುದ್ದಿ
ಟಂಗ್ ಕ್ಲೀನರ್ ಕೂಡ ನೀವು ಬದಲಿಸಬೇಕಾಗುತ್ತದೆ. ಹಾಗೆ ಸೋಂಕಿತ ವ್ಯಕ್ತಿ ಬಳಸಿದ ಶೌಚಾಲಯ, ಬಾತ್ ರೂಮನ್ನು ಸ್ಯಾನಿಟೈಜರ್ ಮಾಡಬೇಕಾಗುತ್ತದೆ. ಇದಲ್ಲದೆ ಕೊರೊನಾ ಸೋಂಕಿನ ವೇಳೆ ಬಳಸಿದ ಟವೆಲ್, ಕರವಸ್ತ್ರಗಳನ್ನು ಬದಲಿಸುವುದು ಸೂಕ್ತವೆಂದು ತಜ್ಞರು ಹೇಳಿದ್ದಾರೆ. ಇದು ಸೋಂಕಿತರನ್ನು ಮತ್ತೆ ಸೋಂಕಿಗೆ ನೂಕುವ ಜೊತೆಗೆ ಮನೆಯವರೆಲ್ಲರನ್ನೂ ಸೋಂಕಿಗೊಳಪಡಿಸುತ್ತದೆ. ಜ್ವರ, ಕೆಮ್ಮು, ನೆಗಡಿಯಿದ್ದರೂ ಬ್ರಷ್ ಬದಲಿಸುವಂತೆ ತಜ್ಞರು ಸಲಹೆ ನೀಡುತ್ತಾರೆ.