ಕೊರೊನಾ ವೈರಸ್ ಸಾಂಕ್ರಾಮಿಕ ರೋಗ ಹೆಚ್ಚುತ್ತಿರುವ ಪ್ರಕರಣಗಳ ನಡುವೆ ದೇಶದಲ್ಲಿ ಮತ್ತೊಂದು ಮಾರಕ ಕಾಯಿಲೆಯ ಅಪಾಯ ಹೆಚ್ಚಾಗಿದೆ. ಇದು ಸಾಂಕ್ರಾಮಿಕ ರೂಪವನ್ನೂ ತೆಗೆದುಕೊಳ್ಳಬಹುದು ಎಂದು ವಿಜ್ಞಾನಿಗಳು ಭಯಪಡುತ್ತಾರೆ. ಹಿಂದೂ ಮಹಾಸಾಗರದ ಅಂಡಮಾನ್ ದ್ವೀಪಗಳಲ್ಲಿ ಕ್ಯಾಂಡಿಡಾ ಆರಿಸ್ ಅಥವಾ ಸಿ ಎಂದು ಕರೆಯಲ್ಪಡುವ ಒಂದು ರೀತಿಯ ಶಿಲೀಂಧ್ರ ಪತ್ತೆಯಾಗಿದೆ. ಇದನ್ನು ಸೂಪರ್‌ಬಗ್ ಎಂದು ಸಂಶೋಧಕರು ಕಂಡುಹಿಡಿದಿದ್ದಾರೆ.
ಕ್ಯಾಂಡಿಡಾ ಒರಿಸ್ ಹೆಚ್ಚು ಅಪಾಯಕಾರಿ. ಏಕೆಂದರೆ ಹೆಚ್ಚಿನ ಆಂಟಿಫಂಗಲ್ ಔಷಧಗಳು ಇದರ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಈ ಶಿಲೀಂಧ್ರವು ರೋಗನಿರೋಧಕ ಶಕ್ತಿ ದುರ್ಬಲವಾಗಿರುವವರ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ. ಲೈವ್ ಸೈನ್ಸ್ ವರದಿಯ ಪ್ರಕಾರ, ಕೊರೊನಾ ವೈರಸ್, ಈ ಮಾರಕ ಶಿಲೀಂಧ್ರ ವೇಗವಾಗಿ ಹರಡುವ ವಾತಾವರಣ ಒದಗಿಸಿದೆ. ಹಾಗಾಗಿ ಬೇಗ ಸಾಂಕ್ರಾಮಿಕ ರೋಗ ಹರಡುವ ಸಾಧ್ಯತೆಯಿದೆ ಎಂದು ತಜ್ಞರು ಹೇಳಿದ್ದಾರೆ.
ದೆಹಲಿ ವಿಶ್ವವಿದ್ಯಾಲಯದ ವೈದ್ಯಕೀಯ ಮೈಕಾಲಜಿಸ್ಟ್ ಡಾ. ಅನುರಾಧಾ ಚೌಧರಿ ಮತ್ತು ಅವರ ತಂಡ ಅಂಡಮಾನ್ ದ್ವೀಪಗಳ ಎಂಟು ಸ್ಥಳಗಳಿಂದ 48 ಮಣ್ಣು ಮತ್ತು ಸಮುದ್ರದ ನೀರಿನ ಮಾದರಿಗಳನ್ನು ಅಧ್ಯಯನ ಮಾಡಿದೆ. ಈ ಸಮಯದಲ್ಲಿ ಅವರು ಎರಡು ಸ್ಥಳಗಳಲ್ಲಿ ಸೂಪರ್ ಬಗ್ ಗಳನ್ನು ಗುರುತಿಸಿದ್ದಾರೆ. ಇದ್ರಲ್ಲಿ ಒಂದು ಸ್ಥಳ ನಿರ್ಜನ ಪ್ರದೇಶವಾಗಿದೆ. ಇನ್ನೊಂದು ಬೀಚ್ ಸ್ಥಳವಾಗಿದ್ದು, ಸಾಕಷ್ಟು ಜನ ದಟ್ಟಣೆ ಇರುತ್ತದೆ. ಈ ಶಿಲೀಂಧ್ರವು ವಿಶ್ವದ ಅನೇಕ ಭಾಗಗಳಲ್ಲಿ ತನ್ನ ಅಸ್ತಿತ್ವವನ್ನು ಹೊಂದಿದೆ.
BIG NEWS: ಸಾಮಾಜಿಕ ಮಾಧ್ಯಮಗಳಿಗೆ ಕೇಂದ್ರ ಸರ್ಕಾರದಿಂದ ಕಟ್ಟುನಿಟ್ಟಿನ ಸೂಚನೆ
ಕ್ಯಾಂಡಿಡಾ ಒರಿಸ್ ಅಥವಾ ಸಿ ಎಂಬ ಸೂಪರ್ ಬಗ್ ಗಾಯದ ಮೂಲಕ ದೇಹವನ್ನು ಪ್ರವೇಶಿಸುತ್ತದೆ. ವಿಶ್ವ ಆರೋಗ್ಯ ಸಂಸ್ಥೆ ಪ್ರಕಾರ, ಸೂಪರ್‌ಬಗ್‌ಗಳು ಮಾನವನ ದೇಹಕ್ಕೆ ಸೇರಿದ ನಂತರ ಸೆಪ್ಸಿಸ್ ಗೆ ಕಾರಣವಾಗುತ್ತದೆ. ಯಾವುದೇ ವಿಶೇಷ ಲಕ್ಷಣಗಳನ್ನು ತೋರಿಸದಿದ್ದರೂ, ಸ್ವಲ್ಪ ಸಮಯದ ನಂತರ ಜ್ವರ ಮತ್ತು ಶೀತ ಕಾಡುತ್ತದೆ. ಅತ್ಯಂತ ಅಪಾಯಕಾರಿ ವಿಷಯವೆಂದರೆ ಔಷಧಿ ತೆಗೆದುಕೊಂಡ ನಂತರವೂ ಜ್ವರ ಕಡಿಮೆಯಾಗುವುದಿಲ್ಲ. ಸಾವು ಸಂಭವಿಸುವ ಸಾಧ್ಯತೆ ಹೆಚ್ಚಿದೆ.