ನವದೆಹಲಿ: ದೇಶದ ಗಮನ ಸೆಳೆದಿದ್ದ 5 ರಾಜ್ಯಗಳ ವಿಧಾನಸಭೆ ಚುನಾವಣೆ ಕೊನೆ ಹಂತದ ಮತದಾನ ಮುಕ್ತಾಯವಾಗಿದೆ. ಇದರ ಬೆನ್ನಲ್ಲೇ ಮತದಾನೋತ್ತರ ಸಮೀಕ್ಷೆ ಪ್ರಕಟವಾಗಿದೆ.
ಉತ್ತರಪ್ರದೇಶ, ಪಂಜಾಬ್, ಉತ್ತರಾಖಂಡ್, ಗೋವಾ, ಮಣಿಪುರ ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆ ನಡೆದಿದ್ದು, ಮಾರ್ಚ್ 10ರಂದು ಫಲಿತಾಂಶ ಪ್ರಕಟವಾಗಲಿದೆ. ಮತದಾನೋತ್ತರ ಸಮೀಕ್ಷೆಗಳು ಇಂತಹ ಪಕ್ಷಗಳೇ ಅಧಿಕಾರಕ್ಕೆ ಬರುತ್ತದೆ ಎಂದು ಹೇಳಿವೆ. ಆದರೆ, ಸಮೀಕ್ಷೆಯೇ ಸತ್ಯವಲ್ಲ ಎನ್ನುವುದಂತೂ ನಿಜ. ನಿಖರವಾದ ಫಲಿತಾಂಶ ತಿಳಿಯಲು ಮಾರ್ಚ್ 10 ರವರೆಗೂ ಕಾಯಬೇಕಿದೆ.
ಟವಿ 9, ಭಾರತ್ ವರ್ಷ್ ಪೋಲ್ ಸ್ಟ್ರ್ಯಾಟ್ ಸಮೀಕ್ಷೆ ಪ್ರಕಾರ ಉತ್ತರ ಪ್ರದೇಶದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರಲಿದೆ.
ಉತ್ತರ ಪ್ರದೇಶ: 430 ಕ್ಷೇತ್ರ,
ಬಿಜೆಪಿ – 221 -225
ಕಾಂಗ್ರೆಸ್ –4-6
ಸಮಾಜವಾದಿ-146 -160
ಬಿ.ಎಸ್.ಪಿ. – 14 -24