
ನವದೆಹಲಿ: ಉತ್ತರಪ್ರದೇಶದಲ್ಲಿ 7ನೇ ಹಾಗೂ ಕೊನೆಯ ಹಂತದ ಮತದಾನ ಮುಕ್ತಾಯವಾಗುವುದರೊಂದಿಗೆ ಐದು ರಾಜ್ಯಗಳ ಚುನಾವಣೆಯ ಮತದಾನ ಸಮೀಕ್ಷೆ ಪ್ರಕಟವಾಗಿದ್ದು, ಮಣಿಪುರದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವ ಸಾಧ್ಯತೆ ಇದೆ.
ಮಣಿಪುರದಲ್ಲಿ ಒಟ್ಟು 60 ಸ್ಥಾನಗಳಿದ್ದು, ಬಹುಮತಕ್ಕೆ 31 ಸ್ಥಾನಗಳು ಅಗತ್ಯವಾಗಿದೆ.
ಇಂಡಿಯಾ ನ್ಯೂಸ್ ಸಮೀಕ್ಷೆಯ ಪ್ರಕಾರ, ಬಿಜೆಪಿ 23 -28, ಕಾಂಗ್ರೆಸ್ 10 -14 ಸ್ಥಾನ ಗಳಿಸಬಹುದು
ಇಂಡಿಯಾ ಟಿವಿ, ಗ್ರೌಂಡ್ ಝೀರೋ ರಿಸರ್ಚ್ ಸರ್ವೆಯ ಪ್ರಕಾರ ಬಿಜೆಪಿ 26 -31, ಕಾಂಗ್ರೆಸ್ 11 -17
ಜೀನ್ಯೂಸ್ ಡಿಸೈನ್ ಬಾಕ್ಸ್ ಸಮೀಕ್ಷೆಯ ಪ್ರಕಾರ, ಬಿಜೆಪಿ 32 -38, ಕಾಂಗ್ರೆಸ್ 12 -17
ನ್ಯೂಸ್ 18, ಪಿ ಮಾರ್ಕ್ ಸಮೀಕ್ಷೆ ಪ್ರಕಾರ ಬಿಜೆಪಿ 27 -31, ಕಾಂಗ್ರೆಸ್ 11 -17 ಕ್ಷೇತ್ರಗಳಲ್ಲಿ ಜಯಗಳಿಸಲಿದೆ.