ನವದೆಹಲಿ: ಉತ್ತರ ಪ್ರದೇಶದಲ್ಲಿ 7ನೇ ಹಾಗೂ ಕೊನೆಯ ಹಂತದ ವಿಧಾನಸಭಾ ಚುನಾವಣೆ ಮತದಾನ ಮುಕ್ತಾಯವಾಗಿದ್ದು, ಇದರ ಬೆನ್ನಲ್ಲೇ ಮತದಾನೋತ್ತರ ಸಮೀಕ್ಷೆ ಪ್ರಕಟವಾಗಿದೆ. ಬಹುತೇಕ ಎಲ್ಲಾ ಸಮೀಕ್ಷೆಗಳ ಪ್ರಕಾರ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲಿದೆ.
ಉತ್ತರ ಪ್ರದೇಶದಲ್ಲಿ ಒಟ್ಟು 403 ಸ್ಥಾನಗಳಿದ್ದು, ಬಹುಮತಕ್ಕೆ 202 ಸ್ಥಾನಗಳು ಬೇಕಿದೆ. ಬಿಜೆಪಿ ಸುಮಾರು 240 ಕ್ಷೇತ್ರಗಳಲ್ಲಿ ಜಯಗಳಿಸಿ ಮತ್ತೊಮ್ಮೆ ಅಧಿಕಾರಕ್ಕೆ ಬರಲಿದೆ ಎಂದು ಸಮೀಕ್ಷೆಗಳು ಹೇಳಿವೆ.
ಸಿಎನ್ಎನ್, ನ್ಯೂಸ್ 18 ಸಮೀಕ್ಷೆಯ ಪ್ರಕಾರ ಬಿಜೆಪಿ 262- 277, ಕಾಂಗ್ರೆಸ್ 3 -8, ಸಮಾಜವಾದಿಪಕ್ಷ 119 -134, ಬಿಎಸ್ಪಿ 7-15
ಇಟಿಜಿ ರಿಸರ್ಚ್ ಸರ್ವೆಯ ಪ್ರಕಾರ ಬಿಜೆಪಿ 230 -245, ಕಾಂಗ್ರೆಸ್ 2 -6 ಸಮಾಜವಾದಿ ಪಕ್ಷ 150 -165, ಬಿಎಸ್ಪಿ 5-10
ನ್ಯೂಸ್ ಎಕ್ಸ್, ಪೋಲ್ಸ್ಟರ್ ಸಮೀಕ್ಷೆಯ ಪ್ರಕಾರ ಬಿಜೆಪಿ 211 -245, ಕಾಂಗ್ರೆಸ್ 4 -6, ಸಮಾಜವಾದಿಪಕ್ಷ 146 -160, ಬಿಎಸ್ಪಿ 14 -24
ರಿಪಬ್ಲಿಕ್ ಟಿವಿ ಸಮೀಕ್ಷೆ ಪ್ರಕಾರ ಬಿಜೆಪಿ 240, ಕಾಂಗ್ರೆಸ್ 4, ಸಮಾಜವಾದಿ ಪಕ್ಷ 140, ಬಿಎಸ್ಪಿ 17
ಟವಿ 9, ಭಾರತ್ ವರ್ಷ್ ಸಮೀಕ್ಷೆ ಪ್ರಕಾರ ಬಿಜೆಪಿ 221 -225, ಕಾಂಗ್ರೆಸ್ 4-6, ಸಮಾಜವಾದಿ 146 -160, ಬಿಎಸ್ಪಿ 14 -24