ಕೊರೊನಾ ಸಮಯದಲ್ಲಿ ಕೆಲವರು ಫಿಟ್ ಆಗಿರಲು ಹೊರಗಡೆ ಹೋಗುವ ಬದಲು ಮನೆಯಲ್ಲಿಯೇ ವ್ಯಾಯಾಮ ಮಾಡುತ್ತಾರೆ. ಆದರೆ ವ್ಯಾಯಾಮಗಳನ್ನು ಮಾಡುವಾಗ ಸರಿಯಾದ ನಿಯಮ ಅನುಸರಿಸಿ. ಹಾಗೇ ಕೆಲವು ವಿಚಾರಗಳ ಬಗ್ಗೆ ಕಾಳಜಿ ವಹಿಸಿ. ಇಲ್ಲವಾದರೆ ಸಮಸ್ಯೆ ಕಾಡಬಹುದು.
ಫಿಟ್ ಆಗಿರಲು ಪ್ರತಿದಿನ ವ್ಯಾಯಾಮ ಮಾಡುವವರು ನಿಮ್ಮ ಆಹಾರದ ಬಗ್ಗೆ ಕಾಳಜಿ ವಹಿಸಿ. ಸರಿಯಾದ ಆಹಾರ ಕ್ರಮಗಳನ್ನು ಪಾಲಿಸಿ, ಪ್ರೋಟೀನ್ ಯುಕ್ತ ಆಹಾರ ಸೇವಿಸಿ. ಇದರಿಂದ ವ್ಯಾಯಾಮದಿಂದ ಲಾಭ ಸಿಗುತ್ತದೆ.
ಸರಿಯಾದ ಮಾಹಿತಿ ಇಲ್ಲದೇ ಯಾವುದೇ ವ್ಯಾಯಾಮವನ್ನು ಮಾಡಬೇಡಿ. ಮತ್ತು ನಿಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ವ್ಯಾಯಾಮ ಮಾಡಿ. ಪ್ರಾರಂಭದಲ್ಲಿ ಸುಲಭವಾದ ವ್ಯಾಯಾಮ ಮಾಡಿ.
ಮನೆಯಲ್ಲಿ ವ್ಯಾಯಾಮ ಮಾಡುವವರು ವ್ಯಾಯಾಮದ ಮ್ಯಾಟ್ ಅನ್ನು ಬಳಸಿ. ಇದರಿಂದ ನೀವು ವ್ಯಾಯಾಮ ಮಾಡುವಾಗ ಬೀಳುವುದು ಗಾಯಗೊಳ್ಳುವುದನ್ನು ತಪ್ಪಿಸಬಹುದು.
ನೀವು ವ್ಯಾಯಾಮ ಮಾಡುವಾಗ ದೇಹಕ್ಕೆ ವಿಶ್ರಾಂತಿ ನೀಡಿ. ನಿರಂತರವಾಗಿ ವ್ಯಾಯಾಮ ಮಾಡಬೇಡಿ. ಇದರಿಂದ ದೇಹದ ಶಕ್ತಿ ಕಡಿಮೆಯಾಗಿ ಆಯಾಸಗೊಳ್ಳುತ್ತದೆ.
ನಿಮ್ಮ ದೇಹದಲ್ಲಿ ಯಾವುದೇ ನೋವಿದ್ದರೆ ಆಗ ವ್ಯಾಯಾಮ ಮಾಡುವುದನ್ನು ತಪ್ಪಿಸಿ. ಇಲ್ಲವಾದರೆ ನೋವು ಹೆಚ್ಚಾಗಬಹುದು.