ಈ ದಶಕದ ಅಂತ್ಯದ ವೇಳೆಗೆ ಭಾರತದಲ್ಲಿ 16 ಎಲೆಕ್ಟ್ರಿಕ್ ವಾಹನಗಳನ್ನು ಬಿಡುಗಡೆ ಮಾಡುವುದಾಗಿ 2021 ರಲ್ಲಿ ಭಾರತದ ಎಸ್‌ಯುವಿ ಸ್ಪೆಷಲಿಸ್ಟ್ ಮಹೀಂದ್ರಾ ಘೋಷಿಸಿತ್ತು. ಕಂಪನಿಯು ಈ ಪ್ರಾಜೆಕ್ಟ್ ಮೇಲೆ ಬರೋಬ್ಬರಿ 3,000 ಕೋಟಿ ರೂ.ಗಳನ್ನು ಹೂಡಿಕೆ ಮಾಡುತ್ತಿದ್ದು 16 ಎಲೆಕ್ಟ್ರಿಕ್ ವಾಹನಗಳನ್ನು ಪರಿಚಯಿಸಲಿದೆ. ಇದರಲ್ಲಿ 8 ವಾಹನಗಳು ಎಲೆಕ್ಟ್ರಿಕ್ ಎಸ್‌ಯುವಿಗಳಾಗಿವೆ. ಈಗ ಕಂಪನಿಯ ಮೊದಲ ಎಲೆಕ್ಟ್ರಿಕ್ SUV ಯ ವಿಶೇಷ ಫೋಟೋಗಳು ವೈರಲ್ ಆಗಿವೆ.
ಫೋಟೋಗಳಲ್ಲಿನ SUV ಅಸ್ತಿತ್ವದಲ್ಲಿರುವ ಮಾದರಿಗಳ ಎಲೆಕ್ಟ್ರಿಕ್ ಆವೃತ್ತಿಯಾಗಿ ಕಂಡುಬರುತ್ತದೆ. ಇದು ಯಾವ ವೇರಿಯಂಟ್ ಎಂದು ಗುರುತಿಸುವುದು ಕಷ್ಟವಾದರೂ. ಗಮನವಿಟ್ಟು ನೋಡಿದಾಗ ಇದು ನಮಗೆ eXUV300 ಅನ್ನು ನೆನಪಿಸುತ್ತದೆ. XUV300 ಸಬ್‌ಕಾಂಪ್ಯಾಕ್ಟ್ SUV ಆಧಾರಿತ ಪರಿಕಲ್ಪನೆಯ EV ಅನ್ನು 2020 ಆಟೋ ಎಕ್ಸ್‌ಪೋದಲ್ಲಿ ಪ್ರದರ್ಶಿಸಲಾಯಿತು. ಇದನ್ನು ಮಹೀಂದ್ರಾ ಅವರ ಮೊದಲ ಎಲೆಕ್ಟ್ರಿಕ್ SUV ಗಳಲ್ಲಿ ಒಂದಾಗಿದೆ ಎಂದು ನಿರೀಕ್ಷಿಸಲಾಗಿದೆ.
ತನಿಖೆ ನಂತ್ರ ಹಿಜಾಬ್ ವಿವಾದದ ಹಿಂದಿನ ಸತ್ಯಾಂಶ ಬಯಲು: ಬಿ.ಸಿ. ನಾಗೇಶ್
ಮಹೀಂದ್ರಾ ಇತ್ತೀಚೆಗೆ ತನ್ನ ಹೊಸ ಎಲೆಕ್ಟ್ರಿಕ್ SUVಯ ಮೊದಲ ಟೀಸರ್ ಅನ್ನು ರಿಲೀಸ್ ಮಾಡಿದೆ. ಇದು ವಾಹನ ತಯಾರಕರ ಬಾರ್ನ್ ಎಲೆಕ್ಟ್ರಿಕ್ ವಿಷನ್‌ನ ಭಾಗವಾಗಿದೆ. ಈ ಮೂಲಕ ಹೊಸ ಮಹೀಂದ್ರ ಎಲೆಕ್ಟ್ರಿಕ್ SUV ಶ್ರೇಣಿಯು ಜುಲೈ 2022 ರಲ್ಲಿ ಡೆಬ್ಯೂಟ್ ಮಾಡಲಿದೆ ಎಂಬ ಮಾಹಿತಿ ನೀಡಿದೆ. ಮಹೀಂದ್ರಾ ಅವರ UK ಯಲ್ಲಿನ, ಮಹೀಂದ್ರ ಅಡ್ವಾನ್ಸ್ಡ್ ಡಿಸೈನ್ ಯುರೋಪ್ (MADE) ಸ್ಟುಡಿಯೋದಲ್ಲಿ ವಿನ್ಯಾಸಗೊಳಿಸಲಾದ ಮೊದಲ ಮಾದರಿಗಳು ಇವು. ಅಷ್ಟೇ ಅಲ್ಲ ಜುಲೈ ತಿಂಗಳಲ್ಲಿ ಈ ವಾಹನ ಡೆಬ್ಯೂಟ್ ಮಾಡಬಹುದು ಎಂದು ತಜ್ಞರು ಹೇಳುತ್ತಿದ್ದಾರೆ.
ಇತ್ತೀಚೆಗೆ ಭಾರತದಲ್ಲಿ ಟೆಸ್ಟ್ ಡ್ರೈವ್ ಮಾಡುತ್ತಿದ್ದ ಈ ವಾಹನವನ್ನು ಗುರುತಿಸಲಾಗಿದೆ. ಫೋಟೊಗಳಲ್ಲಿ ನೋಡುವುದಾದರೆ ಅದರ ಮುಂಭಾಗದ ಬಂಪರ್ eXUV300 ಪರಿಕಲ್ಪನೆಯನ್ನು ಹೋಲುತ್ತದೆ. ಆದರೆ ಈ ವಾಹನ ಸಾಮಾನ್ಯ XUV300 ಗಿಂತ ಸಾಕಷ್ಟು ವಿಭಿನ್ನವಾಗಿದೆ. ಇಂಟಿಗ್ರೇಟೆಡ್ LED DRL ಇಂಡಿಕೇಟರ್ ಗಳು, ಪ್ರೊಜೆಕ್ಟರ್ ಹೆಡ್‌ಲೈಟ್‌ಗಳು, ಮಸ್ಕ್ಯುಲರ್ ಬಂಪರ್, ಎಲ್ಇಡಿ ಫಾಗ್ ಲೈಟ್ಸ್ ಮತ್ತು ವಿಶಾಲವಾದ ಏರ್‌ಡ್ಯಾಮ್‌ನಂತಹ ಭಾಗಗಳು ಕಣ್ಣು ಸೆಳೆಯುತ್ತವೆ.
ಇಂಟಿಗ್ರೇಟೆಡ್ ಟರ್ನ್ ಸಿಂಗಲ್ ಲೈಟ್‌ಗಳು ಮತ್ತು ಟ್ವಿನ್-5-ಸ್ಪೋಕ್ ಅಲಾಯ್ ವೀಲ್‌ಗಳೊಂದಿಗೆ, ನಯವಾಗಿ ಕಾಣುವ ORVM ಗಳು SUVಗೆ ಒಳ್ಳೆ ಲುಕ್ ನೀಡಿವೆ. ಈ ಮಾದರಿಯು ಉತ್ತಮವಾಗಿ ಕಾಣುವ ಚಕ್ರಗಳನ್ನು ಪಡೆಯುತ್ತದೆ ಎಂಬುದು ನಮ್ಮ ಭಾವನೆ. ಈಗಲೇ, ಬ್ಯಾಟರಿ ಸಾಮರ್ಥ್ಯ, ಪವರ್ ಔಟ್‌ಪುಟ್ ಅಥವಾ ಶ್ರೇಣಿಯಂತಹ ತಾಂತ್ರಿಕ ವಿವರಣೆಯ ಕುರಿತು ಕಾಮೆಂಟ್ ಮಾಡುವುದು ಕಷ್ಟ. ಆದರೂ ಆಟೋ ಎಕ್ಸ್‌ಪೋದಲ್ಲಿ ಪ್ರದರ್ಶಿಸಲಾದ eXUV300 ಪರಿಕಲ್ಪನೆಯು 40 kWh ಬ್ಯಾಟರಿ ಪ್ಯಾಕ್‌ನೊಂದಿಗೆ ಬಂದಿದ್ದು, ಒಂದೇ ಚಾರ್ಜ್‌ನಲ್ಲಿ 300 km ಗಿಂತ ಹೆಚ್ಚಿನ ವ್ಯಾಪ್ತಿಯನ್ನು ತಲುಪಿಸುವ ಸಾಮರ್ಥ್ಯವನ್ನು ಹೊಂದಿದೆ ಆದರೆ ವಿದ್ಯುತ್ ಉತ್ಪಾದನೆಯು ಸುಮಾರು 130 bhp ಆಗುವ ನಿರೀಕ್ಷೆಯಿದೆ ಎಂಬುದು ಗಮನಾರ್ಹ.