ಪಂಜಾಬಿನ ಖ್ಯಾತ ಗಾಯಕ ಸಿಧು ಮೂಸೆವಾಲಾರನ್ನು ಹತ್ಯೆಗೈಯ್ಯುವ ಕೆಲವೇ ಗಂಟೆಗಳ ಮುನ್ನ ಹಂತಕರು ಢಾಬಾವೊಂದರಲ್ಲಿ ಭರ್ಜರಿ ಬ್ರೇಕ್ ಫಾಸ್ಟ್ ಮಾಡಿರುವುದು ತನಿಖೆಯಿಂದ ತಿಳಿದುಬಂದಿದೆ.
ಇದಕ್ಕೆ ಸಂಬಂಧಿಸಿದ ಸಿಸಿ ಟಿವಿ ವಿಡಿಯೋವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಮೇ 29 ರಂದು ಬೆಳಗ್ಗೆ ಅನುಮಾನಿತ ಏಳು ಮಂದಿ ಹಂತಕರು ಮಾನ್ಸಾದ ಭಿಖಿ ರಸ್ತೆಯಲ್ಲಿರುವ ಮಾನ್ಸುಖ್ ಢಾಬಾದಲ್ಲಿ ಭರ್ಜರಿಯಾಗಿ ಉಪಹಾರ ಸೇವನೆ ಮಾಡಿರುವುದು ಸಿಸಿ ಟಿವಿಯಲ್ಲಿ ರೆಕಾರ್ಡ್ ಆಗಿದೆ. ಈ ವಿಡಿಯೋವನ್ನು ಪಂಜಾಬ್ ಪೊಲೀಸರು ಬಿಡುಗಡೆ ಮಾಡಿದ್ದಾರೆ.
BIG NEWS: ನಿಮ್ಮದು ಭಾರತ್ ಜೋಡೋ ಅಭಿಯಾನವೋ, ಕಾಂಗ್ರೆಸ್ ಛೋಡೋ ಅಭಿಯಾನವೋ….? ಡಿ.ಕೆ.ಶಿವಕುಮಾರ್ ಗೆ ಬಿಜೆಪಿ ಪ್ರಶ್ನೆ
ಈ ವಿಡಿಯೋದಲ್ಲಿ ಇದ್ದ ಏಳು ಜನರ ಪೈಕಿ ಪ್ರಮುಖ ಆರೋಪಿಗಳಾದ ಮನ್ ಪ್ರೀತ್ ಸಿಂಗ್ ಮಾನು ಮತ್ತು ಜಗರೂಪ್ ಸಿಂಗ್ ರೂಪಾ ಸಹ ಇದ್ದರು. ಈ ಏಳು ಜನರು ಮೂಸೆವಾಲ್ ಹತ್ಯೆಯಲ್ಲಿ ಭಾಗಿಯಾಗಿರಬಹುದು ಅಥವಾ ಹತ್ಯೆಗೆ ಸಂಚು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿರಬಹುದು ಎಂದು ಪೊಲೀಸರು ತಿಳಿಸಿದ್ದಾರೆ.
ಭೋಲಾ, ಸತೇಂದರ್ ಕಾಳಾ, ಸೋನು ಕಾಜಲ್, ಬಿಟ್ಟು, ಅಜಯ್ ಗಿಲ್, ಅಮಿತ್ ಕಾಜ್ಲಾ, ಗೋಲ್ಡೆ ಬ್ರಾರ್, ಲಾರೆನ್ಸ್ ಬಿಷ್ಣೋಯಿ, ಸಚಿನ್ ಮತ್ತು ಜಗ್ಗು ಭಗವನ್ಪುರಿಯಾ ಸೇರಿದಂತೆ ಇನ್ನೂ ಅನೇಕರು ಈ ಕೃತ್ಯದಲ್ಲಿ ಭಾಗಿಯಾಗಿರಬಹುದು ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ.
ಈ ಅನುಮಾನಿತ ಹಂತಕರಲ್ಲಿ ಬಹುತೇಕ ಮಂದಿ ಪಂಜಾಬ್ ಮತ್ತು ಹರ್ಯಾಣ ರಾಜ್ಯದವರಾಗಿದ್ದಾರೆ. ಮೂಸೆವಾಲ್ ರನ್ನು ಬಿಷ್ಣೋಯಿ ಗುಂಪಿನವರು ಹತ್ಯೆ ಮಾಡಿದ್ದಾರೆ ಎಂದು ಬ್ರಾರ್ ಹೇಳಿಕೆ ನೀಡಿದ್ದಾನೆ. ವಿಕ್ಕಿ ಮಿಧುನ್ ಖೇರಾ ಮತ್ತು ಗುರ್ಬಲ್ ಬ್ರಾರ್ ಹತ್ಯೆಗೆ ಪ್ರತೀಕಾರವಾಗಿ ಮೂಸೆವಾಲ್ ನನ್ನು ಹತ್ಯೆ ಮಾಡಿರುವುದಾಗಿ ಹೇಳಿದ್ದಾನೆ ಎಂದು ಮೂಲಗಳು ತಿಳಿಸಿವೆ.