ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ದಕ್ಷಿಣದ ಸ್ಟಾರ್ ಕಪಲ್ ಅಂತಾನೇ ಗುರುತಿಸಿಕೊಂಡಿದ್ರು. ಇಬ್ಬರ ನಡುವಿನ ಕೆಮೆಸ್ಟ್ರಿ, ಡೇಟಿಂಗ್ ಇವೆಲ್ಲವೂ ಸಾಕಷ್ಟು ಸುದ್ದಿಯಾಗಿತ್ತು. ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ಪರಸ್ಪರ ಪ್ರೀತಿಸ್ತಿದ್ದಾರೆ ಅನ್ನೋ ನಂಬಿಕೆಯಲ್ಲಿದ್ದರು ಅಭಿಮಾನಿಗಳು.
ಆದ್ರೀಗ ಅಸಲಿ ಸತ್ಯ ಬಹಿರಂಗವಾಗಿದೆ. ನಟ ರಕ್ಷಿತ್ ಶೆಟ್ಟಿ ಜೊತೆಗಿನ ನಿಶ್ಚಿತಾರ್ಥ ಮುರಿದುಕೊಂಡ ನಂತರ ರಶ್ಮಿಕಾ ಹಾಗೂ ವಿಜಯ್ ದೇವರಕೊಂಡ ಕೆಲ ದಿನಗಳ ಕಾಲ ಡೇಟಿಂಗ್ ನಡೆಸಿದ್ದು ನಿಜ. 2018ರಲ್ಲಿ ಗೀತ ಗೋವಿಂದಮ್ ಹಾಗೂ 2019ರಲ್ಲಿ ಚಿತ್ರೀಕರಣಗೊಂಡಿದ್ದ ಡಿಯರ್ ಕಾಮ್ರೇಡ್ ಚಿತ್ರದಲ್ಲಿ ಜೊತೆಯಾಗಿ ನಟಿಸಿದ್ದ ಇವರಿಬ್ಬರ ಮಧ್ಯೆ ಪ್ರೀತಿ ಹುಟ್ಟಿಕೊಂಡಿತ್ತು.
ಆದ್ರೆ ಇವರಿಬ್ಬರ ಸಂಬಂಧ ಹೆಚ್ಚು ದಿನ ಉಳಿಯಲೇ ಇಲ್ಲ. ಎರಡು ವರ್ಷಗಳ ಹಿಂದೆಯೇ ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಬ್ರೇಕಪ್ ಮಾಡಿಕೊಂಡಿದ್ದಾರೆ. ಈ ಸೂಪರ್ ಹಿಟ್ ಜೋಡಿ ಬೇರೆಯಾಗಲು ಕಾರಣ ಏನು ಅನ್ನೋದು ಮಾತ್ರ ಬಹಿರಂಗವಾಗಿಲ್ಲ. ಸದ್ಯ ರಶ್ಮಿಕಾ ಸಿಂಗಲ್ ಅಂತೆ.
ರಶ್ಮಿಕಾ ತುಂಬಾ ಸುಂದರವಾಗಿದ್ದಾಳೆ ಅಂತಾ ವಿಜಯ್ ಹೊಗಳಿದ್ದು, ಆಕೆಯನ್ನು ಡಾರ್ಲಿಂಗ್ ಅಂತಾನೂ ಕರೆದಿದ್ದರು. ಹಾಗಂದಾಕ್ಷಣ ಇಬ್ಬರೂ ಡೇಟಿಂಗ್ ಮಾಡ್ತಿದ್ದಾರೆ ಅಂತ ಅರ್ಥವಲ್ಲ. ಇವೆಲ್ಲಾ ಸಿನೆಮಾ ಜಗತ್ತಿನ ಸಾಮಾನ್ಯ ಶಬ್ಧಗಳು. ಬ್ರೇಕಪ್ ಆದ್ಮೇಲೂ ರಶ್ಮಿಕಾ ಹಾಗೂ ವಿಜಯ್ ಒಳ್ಳೆ ಫ್ರೆಂಡ್ಸ್ ಆಗಿದ್ದಾರಂತೆ. ಹಾಗಾಗಿ ಈ ಜೋಡಿ ಮತ್ತೆ ಒಂದಾಗಬಹುದು ಅನ್ನೋದು ಅಭಿಮಾನಿಗಳ ನಿರೀಕ್ಷೆ.