ಪುಣೆ ಮೂಲದ ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ, ನವೆಂಬರ್ ಮತ್ತು ಡಿಸೆಂಬರ್ ವೇಳೆಗೆ 2 ರಿಂದ 3 ಕೋಟಿ ಕೊರೊನಾ ಲಸಿಕೆ ಪ್ರಮಾಣವನ್ನು ರಫ್ತು ಮಾಡಲು ತಯಾರಿ ನಡೆಸಿದೆ. ಡಬ್ಲ್ಯುಎಚ್ ಒ ಬೆಂಬಲಿತ ಕೋವಾಕ್ಸ್ ಕಾರ್ಯಕ್ರಮದ ಅಡಿಯಲ್ಲಿ ಲಸಿಕೆಗಳ ರಫ್ತು ನಡೆಯಲಿದೆ. ಭಾರತ ಸರ್ಕಾರದಿಂದ ಸೂಕ್ತ ಸೂಚನೆಗಳಿಗಾಗಿ ಕಾಯುತ್ತಿದ್ದೇವೆ ಎಂದು ಕಂಪನಿಯ ಮುಖ್ಯಸ್ಥ ಆದರ್ ಪೂನವಲ್ಲಾ ತಿಳಿಸಿದ್ದಾರೆ.
ಸಣ್ಣ, ಅತಿಸಣ್ಣ ರೈತರಿಗೆ ಮತ್ತೊಂದು ಗುಡ್ ನ್ಯೂಸ್: ಕೃಷಿ ಉತ್ಪನ್ನ ಸಂಗ್ರಹಣೆ, ಅಡಮಾನ ಸಾಲ ಸೌಲಭ್ಯ
ಕೋವಿಶೀಲ್ಡನ್ನು ಭಾರತದಲ್ಲಿ ಕೊರೊನಾ ಲಸಿಕೆ ಕಾರ್ಯಕ್ರಮದ ಬೆನ್ನೆಲುಬು ಎಂದೇ ಪರಿಗಣಿಸಲಾಗಿದೆ. ಕೋವಿಶೀಲ್ಡ್ ತಯಾರಕ ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ, ತನ್ನ ಉತ್ಪಾದನಾ ಸಾಮರ್ಥ್ಯವನ್ನು ತಿಂಗಳಿಗೆ 22 ಕೋಟಿ ಡೋಸ್ಗಳಿಗೆ ಹೆಚ್ಚಿಸಿದೆ. ಎಸ್ಐಐ ಸಿಇಒ ಪೂನವಲ್ಲಾ, ಪ್ರಸ್ತುತ, ಭಾರತ ಸರ್ಕಾರವು ಲಸಿಕೆಗಳ ರಫ್ತಿಗೆ ಸಂಬಂಧಿಸಿದಂತೆ ಸೂಕ್ತ ಸೂಚನೆಗಳನ್ನು ನೀಡುವುದಕ್ಕಾಗಿ ಕಾಯುತ್ತಿದ್ದೇವೆ. 20 ರಿಂದ 30 ಮಿಲಿಯನ್ ಕೋವಿಡ್ -19 ಲಸಿಕೆ ಪ್ರಮಾಣವನ್ನು ನವೆಂಬರ್ ಮತ್ತು ಡಿಸೆಂಬರ್ ವೇಳೆಗೆ ರಫ್ತು ಮಾಡಲು ಸಿದ್ಧರಾಗ್ತೇವೆಂದು ಅವರು ಹೇಳಿದ್ದಾರೆ.
ಕೋವಿಶೀಲ್ಡ್ ಉತ್ಪಾದನೆಯನ್ನು ಇನ್ನಷ್ಟು ಹೆಚ್ಚಿಸುವ ಗುರಿಯನ್ನು ಕಂಪನಿ ಹೊಂದಿದೆ. ಮಕ್ಕಳ ಕೊರೊನಾ ಲಸಿಕೆ ಫೆಬ್ರವರಿ ವೇಳೆಗೆ ಬಿಡುಗಡೆಯಾಗುವ ನಿರೀಕ್ಷೆಯಿದೆ. ಪ್ರಯೋಗಗಳಲ್ಲಿ ಯಾವುದೇ ಆತುರವಿಲ್ಲ. ಫೆಬ್ರವರಿ 2022 ರೊಳಗೆ ಮಕ್ಕಳಿಗಾಗಿ Kovovax ಪ್ರಾರಂಭಿಸಲು ನಾವು ತಯಾರಿ ನಡೆಸಿದ್ದೇವೆಂದು ಅವರು ಹೇಳಿದ್ದಾರೆ.