ಮೈಸೂರು: ಯುನೈಟೆಡ್ ಬ್ರಿವರೀಸ್ ಲಿಮಿಟೆಡ್ ಘಟಕದ ಮೇಲೆ ಅಬಕಾರಿ ಅಧಿಕಾರಿಗಳು ದಾಳಿ ನಡೆಸಿರುವ ಘಟನೆ ಮೈಸೂರಿನ ತಾಂಡ್ಯ ಕೈಗಾರಿಕಾ ಪ್ರದೇಶದಲ್ಲಿ ನಡೆದಿದೆ.
ದಾಳಿ ವೇಳೆ ಸರ್ಕಾರಕ್ಕೆ ತೋರಿಸಿರುವ ದಾಸ್ತಾನು ಲೆಕ್ಕಕ್ಕಿಂತ ಹೆಚ್ಚು ದಾಸ್ತಾನು ಸಂಗ್ರಹಿಸಿರುವುದು ಪತ್ತೆಯಾಗಿದೆ. 7000 ವಿವಿಧ ಬ್ರ್ಯಾಂಡ್ ನ ಪೆಟ್ಟಿಗೆಯಲ್ಲಿ ಬಿಯರ್ ಬಾಟಲ್ ಗಳು ಸಿಕ್ಕಿವೆ. ಯುಟಿ ಟ್ಯಾಂಕ್, ಸೈಲೋಸ್ ಟ್ಯಾಂಕ್ ಗಳಲ್ಲಿರುವ ಕಚ್ಚಾ ವಸ್ತುಗಳ ಸಮೇತ ಜಪ್ತಿ ಮಾಡಲಾಗಿದ್ದು 17 ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ದಾಳಿ ವೇಳೆ ಬರೋಬ್ಬರಿ 98.52 ಕೋಟಿ ರೂಪಾಯಿ ಮೊತ್ತದ ಬೀಯರ್ ವಶಕ್ಕೆ ಪಡೆಯಲಾಗಿದೆ. ಜಿಲ್ಲಾ ಚುನಾವಣಾಧಿಕಾರಿ ಕಚೇರಿಗೆ ಬಂದ ಅನಾಮಧೇಯ ಕರೆಯ ಮೇರೆಗೆ ಚುನಾವಣಾಧಿಕಾರಿಗಳು ಹಾಗೂ ಅಬಕಾರಿ ಜಂಟಿ ಆಯುಕ್ತರು ಘಟಕದ ಮೇಲೆ ದಾಳಿ ನಡೆಸಿದ್ದರು.