ಕಳೆದ ವಿತ್ತೀಯ ವರ್ಷದಲ್ಲಿ ಪೆಟ್ರೋಲ್ ಮತ್ತು ಡೀಸೆಲ್‌ಗಳ ಮೇಲಿನ ತೆರಿಗೆಗಳಿಂದ ಕೇಂದ್ರ ಸರ್ಕಾರವು 4,55,069 ಕೋಟಿ ರೂಪಾಯಿಗಳನ್ನು ಸಂಗ್ರಹಿಸಿದೆ ಎಂದು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲದ ರಾಜ್ಯ ಸಚಿವ ರಾಮೇಶ್ವರ್ ಟೇಲಿ ಸೋಮವಾರ ಸಂಸತ್ತಿನಲ್ಲಿ ತಿಳಿಸಿದ್ದಾರೆ.
ರಾಜ್ಯಸಭೆಗೆ ಕೊಟ್ಟ ಲಿಖಿತ ಉತ್ತರವೊಂದರಲ್ಲಿ, ರಾಜ್ಯ ಸರ್ಕಾರಗಳು ಇದೇ ಅವಧಿಯಲ್ಲಿ ಇಂಧನದ ಮೇಲಿನ ಮಾರಾಟ ತೆರಿಗೆ ಹಾಗೂ ಮೌಲ್ಯವರ್ಧಿತ ತೆರಿಗೆಗಳ ರೂಪದಲ್ಲಿ 2,02,937 ಕೋಟಿ ರೂಪಾಯಿ ಸಂಗ್ರಹಿಸಿವೆ ಎಂದು ತಿಳಿಸಿದ್ದಾರೆ.
ರಾಜ್ಯಗಳ ಪೈಕಿ, ಮಹಾರಾಷ್ಟ್ರ (25,430 ಕೋಟಿ ರೂ.) ಪೆಟ್ರೋಲಿಯಂ ಉತ್ಪನ್ನಗಳ ಮೇಲೆ ಅತಿ ಹೆಚ್ಚಿನ ತೆರಿಗೆ ಸಂಗ್ರಹಿಸಿದ್ದು, ಉತ್ತರ ಪ್ರದೇಶ (21,956 ಕೋಟಿ ರೂ.) ಮತ್ತು ತಮಿಳುನಾಡು (17,063 ಕೋಟಿ ರೂ.) ನಂತರದ ಸ್ಥಾನಗಳಲ್ಲಿವೆ.
ನೀವು ಸರ್ಕಾರಕ್ಕೆ ಕೆಲಸ ಮಾಡುತ್ತಿದ್ದೀರಾ….? ವರದಿಗಾರನಿಗೆ ರಾಹುಲ್ ಗಾಂಧಿ ಪ್ರಶ್ನೆ
ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಗಳು ನಿಯಂತ್ರಣ ಮೀರಿ ಸಾಗುತ್ತಿದ್ದ ನಡುವೆ, ನವೆಂಬರ್ 3ರಂದು ಪೆಟ್ರೋಲ್ ಮೇಲೆ 5 ರೂಪಾಯಿ ಮತ್ತು ಡೀಸೆಲ್ ಮೇಲೆ 10 ರೂಪಾಯಿಗಳಷ್ಟು ಅಬಕಾರಿ ಸುಂಕವನ್ನು ಕೇಂದ್ರ ಸರ್ಕಾರ ಕಡಿಮೆ ಮಾಡಿತ್ತು. ಅನೇಕ ರಾಜ್ಯಗಳು ಕೇಂದ್ರದ ಘೋಷಣೆ ಬೆನ್ನಿಗೇ ಮೌಲ್ಯವರ್ಧಿತ ತೆರಿಗೆಯಲ್ಲಿ ಇಳಿಕೆ ಮಾಡಿದ್ದವು.
ತನ್ನ ತೈಲದ ಬೇಡಿಕೆಯ 85%ನಷ್ಟನ್ನು ಭಾರತ ಆಮದು ಮಾಡಿಕೊಳ್ಳುತ್ತಿದ್ದರೆ, ನೈಸರ್ಗಿಕ ಅನಿಲದ ಅಗತ್ಯತೆಯ 55%ನಷ್ಟಕ್ಕೆ ಆಮದಿನ ಮೇಲೆ ನಂಬಿಕೊಂಡಿದೆ. 2020-21ರಲ್ಲಿ ಭಾರತವು ಕಚ್ಛಾ ತೈಲಗಳ ಆಮದಿನ ಮೇಲೆ $62.71 ಶತಕೋಟಿ ಖರ್ಚು ಮಾಡಿದೆ.