ಹಳೆಯ ಕಾಲದ ನಾಣ್ಯಗಳು, ನೋಟುಗಳ ಶೇಖರಣೆ ಮಾಡಿದವರು, ಅಪರೂಪದ ಹಾಗೂ ವಿಶಿಷ್ಟ ಶೈಲಿಯ ನಾಣ್ಯಗಳ ಸಂಗ್ರಹಕಾರರಿಗೆ ಸದ್ಯ ಸುಗ್ಗಿಯ ಕಾಲ. ಅದೇನೋ, ಆನ್ಲೈನ್ನಲ್ಲಿ ಈ ಹಳೆಯ ನಾಣ್ಯಗಳ ಖರೀದಿಗೆ ದೊಡ್ಡ ಮಟ್ಟದ ಬೇಡಿಕೆ ಸೃಷ್ಟಿಯಾಗಿದೆ.
ಭಾರತೀಯ ರಿಸರ್ವ್ ಬ್ಯಾಂಕ್ನಿಂದ ಬಿಡುಗಡೆಯಾದ ವಿಶಿಷ್ಟ ಸಂದರ್ಭಗಳಲ್ಲಿನ ನಾಣ್ಯಗಳು, ದಶಕದ ಹಿಂದೆ ಚಾಲ್ತಿಯಲ್ಲಿದ್ದು ಸದ್ಯ ಕಣ್ಮರೆಯಾಗಿರುವ ನೋಟುಗಳನ್ನು ಸಾವಿರ, ಲಕ್ಷ ರೂಪಾಯಿಗಳನ್ನು ಕೊಟ್ಟು ಖರೀದಿಸಲಾಗುತ್ತಿದೆ. ಬಹಳ ಮಂದಿ ತಮ್ಮ ಅಪ್ಪ, ಅಜ್ಜ ಶೇಖರಿಸಿಟ್ಟ ಹಳೆಯ 1 ರೂ. ಮೌಲ್ಯದ ನೋಟು, 2 ರೂ. ಮೌಲ್ಯದ ನಾಣ್ಯಗಳನ್ನೇ ಆನ್ಲೈನ್ ಮಾರುಕಟ್ಟೆಯಲ್ಲಿ ಮಾರಾಟ ಮಾಡಿ ಲಕ್ಷಾಧಿಪತಿಗಳಾಗಿದ್ದಾರೆ.
ಮುಖ್ಯವಾಗಿ, ಸೆಕೆಂಡ್ ಹ್ಯಾಂಡ್ ಮತ್ತು ಇತರ ರೀತಿಯ ಖರೀದಿ-ಮಾರಾಟಕ್ಕೆ ಜನಪ್ರಿಯವಾದ ’’ಒಎಲ್ಎಕ್ಸ್’’ ನಲ್ಲಿ ನಾಣ್ಯ-ನೋಟುಗಳ ಮಾರಾಟ-ಖರೀದಿಯ ಮಾರುಕಟ್ಟೆ ಜೋರಾಗಿದೆ. ಅದರಲ್ಲಿ ಭಾಗಿಯಾಗಲು ನೀವು ಮಾಡಬೇಕಿರುವುದು, ಮೊದಲು ಒಎಲ್ಎಕ್ಸ್ ವೆಬ್ಸೈಟ್ಗೆ ಭೇಟಿ ನೀಡಿ, ಅಲ್ಲಿ ನಿಮ್ಮ ಕೆಲವು ವಿವರಗಳನ್ನು ನೀಡಿ ನೋಂದಣಿ ಮಾಡಿಕೊಳ್ಳುವುದು. ಲಾಗಿನ್ ಐಡಿ, ಪಾಸ್ವರ್ಡ್ ಪಡೆಯುವುದು. ಬಳಿಕ ನಿಮ್ಮ ಬಳಿ ಇರುವ ಹಳೆಯ ಕಾಲದ ನಾಣ್ಯ-ನೋಟುಗಳನ್ನು ಫೋಟೊಗಳನ್ನು ಪೋಸ್ಟ್ ಮಾಡಿ, ಅದಕ್ಕೆ ನಿಮ್ಮ ನಿರೀಕ್ಷಿತ ಮೌಲ್ಯವನ್ನು ನಮೂದಿಸುವುದು.
ಪ್ರತಿಭಟನೆಯಲ್ಲಿ ಪ್ರಾಣ ಕಳೆದುಕೊಂಡ 700 ರೈತರಿಗೆ ಪರಿಹಾರ, ಲೋಕಸಭೆಯಲ್ಲಿ ಘೋಷಣೆಗೆ ಆಗ್ರಹ
ಸದ್ಯಕ್ಕೆ 1917ರ ನ. 30ರಂದು ಮೊದಲ ಮುದ್ರಣ ಕಂಡಂತಹ 1 ರೂ. ಮುಖಬೆಲೆಯ ಭಾರತದ ಕರೆನ್ಸಿ(ನೋಟು) ಬಹಳ ಬೇಡಿಕೆಯಲ್ಲಿದೆ. 1980-1990ರಲ್ಲಿ ಈ ನೋಟು ಬಹಳ ಚಾಲ್ತಿಯಲ್ಲಿದ್ದು, ಕೊನೆಗೆ ಆರ್ಬಿಐನಿಂದ ವಾಪಸ್ ಪಡೆಯಲಾಯಿತು. ಬದಲಿಗೆ 1 ರೂ. ನಾಣ್ಯಗಳ ಬಳಕೆ ಹೆಚ್ಚಾಯಿತು.
1 ರೂ. ಮುಖಬೆಲೆಯ ಹಳೆಯ ನೋಟಿನ ಮೇಲೆ ಕಿಂಗ್ 5ನೇ ಜಾರ್ಜ್ ಅವರ ಭಾವಚಿತ್ರವಿದೆ. ಇದು, ಭಾರತದ ಮೇಲೆ ಬ್ರಿಟಿಷರ ಆಡಳಿತದ ಕುರುಹು ಕೂಡ ಆಗಿದೆ. ಈ 1 ರೂ. ನೋಟಿಗೆ ಕೆಲವು ಖರೀದಿದಾರರು ಸದ್ಯ ಮಾರುಕಟ್ಟೆಯಲ್ಲಿ 1 ಲಕ್ಷ ರೂ.ವರೆಗೆ ಮೌಲ್ಯ ಕಟ್ಟುತ್ತಿದ್ದಾರೆ.
ಒಎಲ್ಎಕ್ಸ್ ಒಂದೇ ಅಲ್ಲದೆಯೇ ನಾಣ್ಯಗಳು-ನೋಟುಗಳ ಮಾರಾಟ ವೇದಿಕೆಯು ಕಾಯಿನ್ಬಜಾರ್ ಮತ್ತು ಕ್ವಿಕರ್ ಆನ್ಲೈನ್ ವೇದಿಕೆಗಳಲ್ಲೂ ಚಾಲ್ತಿಯಲ್ಲಿದೆ.