ಮಕ್ಕಳಲ್ಲಿ ಅತಿಯಾದ ಸಕ್ಕರೆ ಸೇವನೆ ಅಂಶ ಕಡಿಮೆ ಮಾಡೋದ್ರಿಂದ ನಾನ್ ಆಲ್ಕೋಹಾಲಿಕ್ ಫ್ಯಾಟಿ ಲಿವರ್ ಸಮಸ್ಯೆಯನ್ನ ನಿಯಂತ್ರಿಸಬಹುದು ಎಂದು ಸಂಶೋಧಕರು ಹೇಳಿದ್ದಾರೆ. ಸ್ಥೂಲಕಾಯದ ಬಗ್ಗೆ ಪ್ರಕಟವಾದ ಅಧ್ಯಯನದಲ್ಲಿ ಕಡಿಮೆ ದೇಹ ದಂಡನೆ, ದೇಹದಲ್ಲಿ ಅತಿಯಾದ ಸಕ್ಕರೆ ಅಂಶದಿಂದಾಗಿ ಯಕೃತ್ತಿಗೆ ಹಾನಿ ಉಂಟಾಗಲಿದೆ ಎಂದು ವರದಿಯಾಗಿದೆ.
ಗ್ಲುಕೋಸ್ ಹಾಗೂ ಸುಕ್ರೋಸ್ ಅಂಶ ಹಣ್ಣು, ತರಕಾರಿ, ಕ್ಷೀರೋತ್ಪನ್ನಗಳಲ್ಲಿ ಇರುತ್ತೆ. ಈ ಲಿವರ್ ಸಮಸ್ಯೆ ವಯಸ್ಕರಲ್ಲಿ ಮಾತ್ರವಲ್ಲದೇ ಮಕ್ಕಳಲ್ಲಿಯೂ ಕಾಣಿಸಿಕೊಳ್ಳಬಹುದು ಎಂದು ಸಂಶೋಧಕರು ಹೇಳಿದ್ದಾರೆ.
ಟೈಪ್ 2 ಡಯಾಬಿಟೀಸ್, ಎನ್ಎಎಫ್ಎಲ್ಡಿ ಕೇವಲ ವಯಸ್ಕರಲ್ಲಿ ಮಾತ್ರ ಕಂಡುಬರುತ್ತೆ ಎಂದು ಹೇಳಲಾಗ್ತಿತ್ತು. ಆದರೆ ಈ ಮಾತು ಸುಳ್ಳು ಎಂದು ಜಿನೋಮಿಕ್ಸ್ ಸಂಶೋಧನಾ ಸಂಸ್ಥೆಯ ಪ್ರೊಫೆಸರ್ ಜೊಹನ್ನಾ ಡಿಸ್ಟೆಫಾನೋ ಹೇಳಿದ್ದರು.
ಡಿಸ್ಟೆಫಾನೋ ನೇತೃತ್ವದ ಈ ಹಿಂದಿನ ಅಧ್ಯಯನದಲ್ಲಿ ಪ್ರುಕ್ಟೋಸ್ ಕೋಶದ ಕಾರ್ಯವನ್ನ ಬದಲಾವಣೆ ಮಾಡುತ್ತೆ. ಇದು ಯಕೃತ್ತಿನ ಕಾಯಿಲೆಗೆ ಕಾರಣವಾಗುತ್ತದೆ. ಹೀಗಾಗಿ ಅತಿಯಾದ ಫ್ರುಕ್ಟೋಸ್ ಅಂಶದ ಆಹಾರವನ್ನ ಸೇವಿಸುವ ಮಕ್ಕಳಲ್ಲಿ ಈ ಸಮಸ್ಯೆ ಕಾಣುತ್ತದೆ ಎಂದು ತಿಳಿದು ಬಂದಿತ್ತು.