ಮಲಗುವ ಸಮಯದಲ್ಲಿ ವಿಪರೀತ ಹಸಿವಾಗುತ್ತಿದೆಯೇ. ಇದಕ್ಕೆ ನಿಮ್ಮ ಆಹಾರ ಪದ್ಧತಿಯೇ ಕಾರಣವಿರಬಹುದು. ನೀವು ಡಯಟ್ ನೆಪದಲ್ಲಿ ರಾತ್ರಿಯೂಟ ಬಿಡುವುದೂ ಇದಕ್ಕೆ ಕಾರಣವಿರಬಹುದು.
ಸಣ್ಣಗಾಗಬೇಕಾದರೆ, ದೇಹ ತೂಕ ಇಳಿಸಬೇಕಾದರೆ ರಾತ್ರಿ ಕಡಿಮೆ ಊಟ ಮಾಡಬೇಕು ಎಂಬುದೇನೋ ನಿಜ. ಹಾಗೆಂದು ರಾತ್ರಿ ಊಟವೇ ಬಿಡುವುದು ಸರಿಯಲ್ಲ. ದೇಹಕ್ಕೆ ಬೇಕಾದ ಪೋಷಕಾಂಶಗಳನ್ನು ಒಂದಿಲ್ಲೊಂದು ರೂಪದಲ್ಲಿ ಸೇವನೆ ಮಾಡುವುದು ಬಹಳ ಮುಖ್ಯ.
ರಾತ್ರಿ ಮಲಗುವ ಕನಿಷ್ಠ ಎರಡು ಗಂಟೆ ಮುನ್ನ ಊಟ ಮಾಡಿ. ಇದರಿಂದ ಹಸಿವೂ ಆಗುವುದಿಲ್ಲ, ನಿಮ್ಮ ಡಯಟ್ ಪ್ಲಾನ್ ಕೂಡಾ ಕೆಲಸ ಮಾಡುತ್ತದೆ.
ರಾತ್ರಿ ಮಲಗಿದ ಸುಮಾರು ಹೊತ್ತಿನ ತನಕ ನಿದ್ದೆ ಬಾರದಿದ್ದರೂ ಹಸಿವಿನ ಅನುಭವ ಆಗುತ್ತದೆ. ಆಗ ಬಾಳೆಹಣ್ಣು ಅಥವಾ ಇತರ ಯಾವುದಾದರೂ ಹಣ್ಣುಗಳನ್ನು ತಿಂದು ಅಥವಾ ಬೆಚ್ಚಗಿನ ಹಾಲು ಕುಡಿದು ಹಸಿವು ಕಡಿಮೆ ಮಾಡಿಕೊಳ್ಳಿ. ಮಲಗುವ ವೇಳೆ ಟೀ ಕಾಫಿ ಕುಡಿಯುವ ಅಭ್ಯಾಸವಿದ್ದರೆ ಮೊದಲು ಅದನ್ನು ಬಿಡಿ.