alex Certify ಪ್ರಾಣಕ್ಕೇ ಕುತ್ತು ತರಬಹುದು ಅತಿಯಾದ ವ್ಯಾಯಾಮ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪ್ರಾಣಕ್ಕೇ ಕುತ್ತು ತರಬಹುದು ಅತಿಯಾದ ವ್ಯಾಯಾಮ…!

ನಿಯಮಿತವಾದ ವ್ಯಾಯಾಮ ನಮ್ಮ ಆರೋಗ್ಯಕ್ಕೆ ಅವಶ್ಯಕ. ಆದರೆ ಅತಿಯಾದ ದೈಹಿಕ ಚಟುವಟಿಕೆ ಆರೋಗ್ಯಕ್ಕೆ ಮಾರಕವೂ ಆಗಬಹುದು. ವಿಶೇಷವಾಗಿ ಬೇಸಿಗೆಯಲ್ಲಿ ವ್ಯಾಯಾಮ ಮಾಡುವಾಗ ಬಹಳ ಜಾಗರೂಕರಾಗಿರಬೇಕು.

ಒಬ್ಬ ವ್ಯಕ್ತಿಯನ್ನು ದೈಹಿಕವಾಗಿ ಮತ್ತು ಮಾನಸಿಕವಾಗಿ ಆರೋಗ್ಯವಾಗಿಡಲು ಪ್ರತಿದಿನ ಕೇವಲ 30 ನಿಮಿಷಗಳ ವ್ಯಾಯಾಮ ಸಾಕು. ಬೇಸಿಗೆಯಲ್ಲಿ ವ್ಯಾಯಾಮ ಮಾಡಲು ಉತ್ತಮ ಸಮಯವೆಂದರೆ ಬೆಳಗ್ಗೆ 10 ಗಂಟೆಗೂ ಮೊದಲು ಮತ್ತು ಸಂಜೆ 4 ಗಂಟೆಯ ನಂತರ.

ಸಿಗೆಯಲ್ಲಿ ತಪ್ಪಾದ ಸಮಯದಲ್ಲಿ ಮತ್ತು ದೀರ್ಘಕಾಲದವರೆಗೆ ದೈಹಿಕ ಚಟುವಟಿಕೆ ಅಥವಾ ವಿಪರೀತ ವ್ಯಾಯಾಮ ಮಾಡುತ್ತಿದ್ದರೆ ಕೂಡಲೇ ಬಿಟ್ಟುಬಿಡಿ. ಏಕೆಂದರೆ ಇದರಿಂದ ಆರೋಗ್ಯ ಸಮಸ್ಯೆಗಳು ಉಂಟಾಗಬಹುದು.

ಡಿಹೈಡ್ರೇಶನ್

ಬೇಸಿಗೆಯಲ್ಲಿ ವ್ಯಾಯಾಮ ಮಾಡುವಾಗ ದೇಹವು ಹೆಚ್ಚು ಬೆವರುತ್ತದೆ.  ಇದರಿಂದಾಗಿ ದೇಹದಲ್ಲಿ ದ್ರವದ ಕೊರತೆಯಾಗುವುದು ಸಹಜ. ವ್ಯಾಯಾಮದ ಸಮಯದಲ್ಲಿ ಚೆನ್ನಾಗಿ ನೀರು ಕುಡಿಯದೇ ಇದ್ದಲ್ಲಿ ಡಿಹೈಡ್ರೇಶನ್‌ ಉಂಟಾಗಬಹುದು. ಇದರಿಂದ ಬಾಯಿ ಒಣಗುವುದು, ತಲೆತಿರುಗುವಿಕೆ ಸೇರಿದಂತೆ ಹಲವು ಸಮಸ್ಯೆಗಳಾಗುತ್ತವೆ.

ಹೀಟ್‌ ಸ್ಟ್ರೋಕ್‌

ಅತಿಯಾದ ವ್ಯಾಯಾಮವು ಹೀಟ್ ಸ್ಟ್ರೋಕ್‌ನಂತಹ ಗಂಭೀರ ಕಾಯಿಲೆಗಳ ಅಪಾಯವನ್ನು ಹೆಚ್ಚಿಸುತ್ತದೆ. ದೇಹದ ಉಷ್ಣತೆಯನ್ನು ನಿಯಂತ್ರಿಸಲು ಸಾಧ್ಯವಾಗದಿದ್ದಾಗ ಹೀಟ್ ಸ್ಟ್ರೋಕ್ ಸಂಭವಿಸುತ್ತದೆ. ಇದರ ಲಕ್ಷಣಗಳೆಂದರೆ ಅಧಿಕ ಜ್ವರ, ವಾಂತಿ, ಮೂರ್ಛೆ ಮತ್ತು ರೋಗಗ್ರಸ್ತವಾಗುವಿಕೆ. ಹೀಟ್ ಸ್ಟ್ರೋಕ್ ಕೂಡ ಮಾರಣಾಂತಿಕವಾಗಬಹುದು. ಆದ್ದರಿಂದ ರೋಗಲಕ್ಷಣಗಳು ಕಾಣಿಸಿಕೊಂಡರೆ ತಕ್ಷಣ ವೈದ್ಯರನ್ನು ಸಂಪರ್ಕಿಸಿ.

ನಿದ್ರಾಹೀನತೆ

ಅತಿಯಾದ ವ್ಯಾಯಾಮದಿಂದಾಗಿ ಒತ್ತಡದ ಹಾರ್ಮೋನ್ ಕಾರ್ಟಿಸೋಲ್ ದೇಹದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬಿಡುಗಡೆಯಾಗಲು ಪ್ರಾರಂಭಿಸುತ್ತದೆ. ಈ ಕಾರಣದಿಂದಾಗಿ ನಿದ್ರೆಯ ಗುಣಮಟ್ಟ ಕಡಿಮೆಯಾಗುತ್ತದೆ ಮತ್ತು ನಿದ್ರಾಹೀನತೆಯ ಸಮಸ್ಯೆಯೂ ಪ್ರಾರಂಭವಾಗುತ್ತದೆ.

ಇತರ ಆರೋಗ್ಯ ಸಮಸ್ಯೆಗಳು

ಬೇಸಿಗೆಯಲ್ಲಿ ಅತಿಯಾದ ವ್ಯಾಯಾಮ ಮಾಡುವುದರಿಂದ ಹೃದಯ ಸಂಬಂಧಿ ಸಮಸ್ಯೆಗಳು ಮತ್ತು ಕಿಡ್ನಿ ಸಮಸ್ಯೆಗಳು ಹೆಚ್ಚಾಗುವ ಸಾಧ್ಯತೆ ಇರುತ್ತದೆ. ಅಸ್ತಮಾ ರೋಗಿಗಳು ವಿಪರೀತ ವ್ಯಾಯಾಮ ಮಾಡುವುದರಿಂದ ಅವರಲ್ಲಿ ಉಸಿರಾಟದ ತೊಂದರೆ ಹೆಚ್ಚಾಗಬಹುದು.

ಹಾಗಾಗಿ ವ್ಯಾಯಾಮದ ಮೊದಲು, ವ್ಯಾಯಾಮ ಮಾಡುವಾಗ ಮತ್ತು ನಂತರ ನೀರನ್ನು ಕುಡಿಯಿರಿ. ಸೂರ್ಯನ ಶಾಖ ಕಡಿಮೆ ಇರುವ ಸಮಯದಲ್ಲಿ ಅಂದರೆ ಬೆಳಗ್ಗೆ ಅಥವಾ ಸಂಜೆ ವ್ಯಾಯಾಮ ಮಾಡುವುದು ಸೂಕ್ತ. ವಿಪರೀತ ಶ್ರಮದಾಯಕವಾದ ವ್ಯಾಯಾಮವನ್ನು ತಪ್ಪಿಸಿ ಮತ್ತು ಲಘು ವ್ಯಾಯಾಮಕ್ಕೆ ಆದ್ಯತೆ ನೀಡಿ. ದಣಿವು ಅಥವಾ ತಲೆತಿರುಗಿದಂತೆ ಅನಿಸಿದರೆ ವಿಶ್ರಾಂತಿ ಪಡೆಯಿರಿ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...