ಅರಶಿನ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದರಿಂದ ಹಲವು ರೋಗಗಳನ್ನು ಗುಣಪಡಿಸಬಹುದು. ಇದನ್ನು ಚಿಕ್ಕ ಪುಟ್ಟ ಗಾಯಗಳಿಂದ ಕ್ಯಾನ್ಸರ್ ನಂತಹ ದೊಡ್ಡ ದೊಡ್ಡ ಕಾಯಿಲೆಯ ಚಿಕಿತ್ಸೆಯಲ್ಲಿ ಬಳಸುತ್ತಾರೆ. ಆದರೆ ಇದನ್ನು ಅತಿಯಾಗಿ ಬಳಸಿದರೆ ಕೆಲವು ಅಡ್ಡಪರಿಣಾಮಗಳು ಬೀರುತ್ತದೆ. ಅವು ಯಾವುದೆಂಬುದನ್ನು ತಿಳಿದುಕೊಳ್ಳಿ.
*ಅರಿಶಿನ ಉತ್ತಮ ರೋಗನಿರೋಧಕ ಗುಣಗಳನ್ನು ಹೊಂದಿದೆ. ಇದು ಗರ್ಭಿಣಿಯರಿಗೆ ಉತ್ತಮ ನಿಜ. ಆದರೆ ಇದು ಗರ್ಭಕೋಶವನ್ನು ಉತ್ತೇಜಿಸುವುದರಿಂದ ಅತಿಯಾಗಿ ಸೇವಿಸಿದರೆ ಗರ್ಭಪಾತವಾಗುವ ಸಂಭವವಿದೆ.
*ಅರಶಿನವನ್ನು ಅತಿಯಾಗಿ ಸೇವಿಸಿದರೆ ಮಲಬದ್ಧತೆ, ಅತಿಸಾರ, ವಾಕರಿಕೆ, ವಾಂತಿ, ಅಜೀರ್ಣ, ಹೊಟ್ಟೆ ನೋವು ಸಮಸ್ಯೆ ಕಾಡಬಹುದು. ಇದನ್ನು ಅತಿಯಾಗಿ ಸೇವಿಸುವುದರಿಂದ ಪಿತ್ತಗಲ್ಲು ಬೆಳೆಯುವ ಅಪಾಯವಿದೆ.
*ಮೂತ್ರಪಿಂಡದಲ್ಲಿ ಕಲ್ಲಿನ ಸಮಸ್ಯೆ ಇರುವವರು ಅರಶಿನವನ್ನು ಹೆಚ್ಚಾಗಿ ಸೇವಿಸಬೇಡಿ. ಇದರಿಂದ ಅವರಿಗೆ ಅಪಾಯ ಕಾಡಬಹುದು.