ಅತಿಯಾದ ಸಕ್ಕರೆ ಅಂಶವುಳ್ಳ ಪೇಯಗಳ ಸೇವನೆಯಿಂದ ಆರೋಗ್ಯ ಸಂಬಂಧಿ ಸಮಸ್ಯೆಗಳಾದ ತೂಕ ಹೆಚ್ಚುವಿಕೆ, ರಕ್ತದಲ್ಲಿ ಗ್ಲೂಕೋಸ್ ಮಟ್ಟವು ಅನಾರೋಗ್ಯ ಮಟ್ಟ ತಲುಪುವಂಥ ಸಮಸ್ಯೆಗಳು ಸೃಷ್ಟಿಯಾಗುತ್ತವೆ. ಈ ಪೇಯಗಳಿಂದ ಹಲ್ಲುಗಳಿಗೆ ಕ್ಷಾರಿಕ ಹಾನಿಯಾಗುವ ಸಂಭವವಿರುವ ಕಾರಣ ಸಾಧ್ಯವಾದಷ್ಟು ಇವುಗಳನ್ನು ತ್ಯಜಿಸುವುದು ಸೂಕ್ತ.
ಅಲೂಗೆಡ್ಡೆ ಚಿಪ್ಸ್
ಪಿಷ್ಟದಂಶ ಹೆಚ್ಚಿರುವ ಪದಾರ್ಥಗಳ ಚೂರುಗಳು ಹಲ್ಲುಗಳ ಸಂಧಿಗಳಿಗೆ ಸೇರಿಕೊಂಡ ಮೇಲೆ ಸರಿಯಾಗಿ ಸ್ವಚ್ಛಗೊಳಿಸದೇ ಇದ್ದಲ್ಲಿ ದಂತಕುಳಿಗಳು ಸೃಷ್ಟಿಯಾಗುವ ಸಾಧ್ಯತೆ ಇರುತ್ತದೆ. ಹಾಗಾಗಿ, ಆಲೋಗೆಡ್ಡೆ ಚಿಪ್ಸ್, ಫ್ರೈಸ್ ಹಾಗೂ ಪಿಷ್ಟದಂಶ ಹೆಚ್ಚಿರುವ ಆಹಾರಗಳ ಸೇವನೆಯನ್ನು ಸಾಧ್ಯವಾದಷ್ಟು ವರ್ಜಿಸುವುದು ಸೂಕ್ತ.
ಒಣ ಹಣ್ಣುಗಳು
ಆರೋಗ್ಯಕ್ಕೆ ಪ್ರಯೋಜನಕಾರಿಯೇ ಆಗಿರುವ ಒಣಹಣ್ಣುಗಳು ನಿಮ್ಮ ಹಲ್ಲುಗಳಿಗೆ ಸರಿಯಲ್ಲದೇ ಇರಬಹುದು. ಕೇಂದ್ರಿತವಾದ ಸಕ್ಕರೆಯಂಶ ಹಾಗು ಅಂಟಿನಂಶ ಇರುವ ಕಾರಣ ಒಣಹಣ್ಣುಗಳ ನಿರಂತರ ಸೇವನೆಯಿಂದ ಹಲ್ಲುಗಳ ಆರೋಗ್ಯದ ಮೇಲೆ ಪರಿಣಾಮ ಉಂಟಾಗಬಹುದು.
ವೈನ್
ನೀವು ನಿರಂತರವಾಗಿ ವೈನ್ ಕುಡಿಯುತ್ತಿದ್ದರೆ, ಈ ಅಭ್ಯಾಸದಿಂದ ನಿಮ್ಮ ಹಲ್ಲುಗಳಿಗೆ ನಕಾರಾತ್ಮಕ ಪರಿಣಾಮ ಉಂಟಾಗಬಹುದು. ವೈನ್, ಕಾಫಿ, ಟೀ ಇತ್ಯಾದಿಗಳು ಹಲ್ಲುಗಳು ಹಳದಿಗಟ್ಟುವಿಕೆಗೆ ಕಾರಣವಾಗಬಲ್ಲವು. ನಿರಂತರವಾಗಿ ವೈನ್ ಸೇವನೆಯಿಂದ ಹಲ್ಲುಗಳು ಕೊಳೆತು, ಎನಾಮೆಲ್ ನವೆಯುವ ಸಾಧ್ಯತೆ ಇರುತ್ತದೆ.
ಕ್ಯಾಂಡಿಗಳು
ಮಕ್ಕಳಿಗೆ ಕ್ಯಾಂಡಿ ತಿನ್ನುವುದು ಎಂದರೆ ಭಾರೀ ಪ್ರೀತಿ. ಆದರೆ ಇವುಗಳು ಹಲ್ಲುಗಳ ವೈರಿಗಳು ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. ಗಟ್ಟಿಯಾದ ಕ್ಯಾಂಡಿಗಳು, ಚಾಕ್ಲೇಟ್‌ಗಳಂಥವು ಸಕ್ಕರೆ ಅಂಶ ಅಧಿಕವಾಗಿ ಹೊಂದಿರುವ ಕಾರಣ, ಹಲ್ಲುಗಳಲ್ಲಿ ಸಿಲುಕಿದಾಗ ಸುದೀರ್ಘಾವಧಿಯ ಸಮಸ್ಯೆ ತಂದಿಡಬಲ್ಲವು.