ದಿನವೊಂದಕ್ಕೆ ಆರಕ್ಕಿಂತ ಹೆಚ್ಚು ಬಾರಿ ಕಾಫಿ ಕುಡಿದರೆ ಡೆಮೆನ್ಶಿಯಾ ಸಮಸ್ಯೆ ಹಾಗೂ ಸ್ಟ್ರೋಕ್ ಸಂಭವಿಸುವ ಸಾಧ್ಯತೆಗಳು ಇರುತ್ತದೆ ಎಂದು ಸಂಶೋಧಕ ತಂಡವೊಂದು ನಡೆಸಿದ ಅಧ್ಯಯನದಿಂದ ಕಂಡುಬಂದಿತ್ತು.
ನರ ಸಂಬಂಧಿ ಸಮಸ್ಯೆಯಾದ ಡೆಮೆನ್ಶಿಯಾದಿಂದ ಮರೆವು, ವರ್ತನೆಯಲ್ಲಿ ಬದಲಾವಣೆ ಹಾಗೂ ಗ್ರಹಿಕಾ ಶಕ್ತಿಯಲ್ಲಿ ವ್ಯತ್ಯಾಸಗಳಾಗುತ್ತವೆ. ಅಲ್ಜೈಮರ‍್ಸ್ ಸಹ ಡೆಮೆನ್ಶಿಯಾದ ಒಂದು ಪರಿಯಾಗಿದೆ.