ಇತ್ತೀಚಿನ ದಿನಗಳಲ್ಲಿ ತೂಕದ ಸಮಸ್ಯೆ ಹೆಚ್ಚಿನ ಜನರನ್ನು ಕಾಡುತ್ತಿದೆ. ಕೆಲವರು ತೂಕ ಹೆಚ್ಚಳ ಸಮಸ್ಯೆಯಿಂದ ಬಳಲುತ್ತಿದ್ದರೆ, ಇನ್ನೂ ಕೆಲವರು ತೂಕ ನಷ್ಟದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಆದರೆ ಕೆಲವರ ತೂಕ ವೇಗವಾಗಿ ಹೆಚ್ಚುತ್ತಿದೆ. ಆದರೆ ಇದನ್ನು ನಿರ್ಲಕ್ಷಿಸಬೇಡಿ, ಯಾಕೆಂದರೆ ಇದರಿಂದ ಗಂಭೀರ ಕಾಯಿಲೆಗಳು ಉಂಟಾಗುಬಹುದು.
ತೂಕ ನಿಯಂತ್ರಣದಲ್ಲಿಡಲು ಸಮತೋಲಿತ ಆಹಾರ, ವ್ಯಾಯಾಮ, ಸಾಕಷ್ಟು ನಿದ್ರೆಯ ಅವಶ್ಯಕತೆ ಇರುತ್ತದೆ. ಹಾಗಾಗಿ ನೀವು ತೂಕ ಹೆಚ್ಚಾಗಲು ಅತಿಯಾಗಿ ಆಹಾರ ಸೇವಿಸಿದರೆ ಇದರಿಂದ ರಕ್ತದಲ್ಲಿ ಸಕ್ಕರೆ ಪ್ರಮಾಣ ಹೆಚ್ಚಾಗಿ ಮಧುಮೇಹ ಸಮಸ್ಯೆ ಕಾಡಬಹುದು.
ಅತಿಯಾದ ತೂಕ ಹೆಚ್ಚಳ ಪಿತ್ತಕೋಶ ಮತ್ತು ಕಿಡ್ನಿ ಸ್ಟೋನ್ ಸಮಸ್ಯೆಗ ಕಾರಣವಾಗಬಹುದು. ಅತಿಯಾದ ದೇಹವನ್ನು ಹೊಂದಿರುವುದರಿಂದ ದೇಹದಲ್ಲಿ ನಿರ್ಜಲೀಕರಣ ಸಮಸ್ಯೆಗೆ ಕಾರಣವಾಗಿ ಪಿತ್ತಕೋಶ ಮತ್ತು ಕಿಡ್ನಿಯಲ್ಲಿ ಸ್ಟೋನ್ ಆಗಬಹುದು.
ದೇಹದ ತೂಕ ಹೆಚ್ಚಾದಾಗ ಕೀಲುಗಳ ಮೇಲೆ ಹೆಚ್ಚಿನ ಒತ್ತಡ ಬೀಳುತ್ತದೆ. ಇದರಿಂದ ಮೊಣಕಾಲು, ಸೊಂಟ, ಬೆನ್ನಿನ ಮೇಲೆ ಪರಿಣಾಮ ಬಿದ್ದು ಕೀಲು ನೋವಿನ ಸಮಸ್ಯೆ ಉಂಟಾಗುತ್ತದೆ.
ತೂಕ ಹೆಚ್ಚಳದಿಂದ ನಿದ್ರೆಯಲ್ಲಿ ಉಸಿರುಗಟ್ಟಿದಂತಾಗುತ್ತದೆ. ಸರಿಯಾಗಿ ಉಸಿರಾಡಲು ಸಾಧ್ಯವಾಗುವುದಿಲ್ಲ. ಇದರಿಂದ ಹೃದಯದ ಕಾಯಿಲೆ ಮತ್ತು ಪಾರ್ಶ್ವವಾಯು ಅಪಾಯ ಹೆಚ್ಚಾಗಬಹುದು.
ತೂಕ ಹೆಚ್ಚಳದಿಂದ ಲಿವರ್ ಸಮಸ್ಯೆ ಹೆಚ್ಚಾಗುತ್ತದೆ. ಇದರಿಂದ ಕ್ಯಾನ್ಸರ್ ನಂತಹ ಗಂಭೀರ ಕಾಯಿಲೆಯ ಅಪಾಯವಿರುತ್ತದೆ ಮತ್ತು ಫಲವತ್ತತೆಯ ಮೇಲೂ ಪರಿಣಾಮ ಬೀರುತ್ತದೆ.