ತಪ್ಪಾಗಿ ಪಾವತಿ ಮಾಡಲಾಗಿದ್ದ ಹೆಚ್ಚುವರಿ ವೇತನವನ್ನು ಸಿಬ್ಬಂದಿ ನಿವೃತ್ತಿಯಾದ ನಂತರ ವಾಪಸ್ ಪಡೆಯುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ.
ನ್ಯಾಯಮೂರ್ತಿಗಳಾದ ಎಸ್.ಎ. ನಸೀರ್ ಮತ್ತು ವಿಕ್ರಂ ನಾಥ್ ಅವರಿದ್ದ ವಿಭಾಗೀಯ ಪೀಠ ಈ ವಿಚಾರಕ್ಕೆ ಸಂಬಂಧಿಸಿದಂತೆ ಸೋಮವಾರ ತೀರ್ಪು ನೀಡಿದ್ದು, ಹೆಚ್ಚುವರಿ ಪಾವತಿಯ ಹಣದ ವಸೂಲಾತಿಗೆ ತಡೆಯಾಜ್ಞೆ ನೀಡಿದೆ. ಉದ್ಯೋಗಿಗಳಿಗೆ ನೀಡಲಾದ ಹೆಚ್ಚುವರಿ ವೇತನವನ್ನು ನಿವೃತ್ತಿಯಾದ ನಂತರ ವಾಪಸ್ ಪಡೆಯುವುದರಿಂದ ಅವರಿಗೆ ಆರ್ಥಿಕ ಸಂಕಷ್ಟ ಉಂಟಾಗುತ್ತದೆ ಎಂದು ಅಭಿಪ್ರಾಯಪಟ್ಟಿದೆ.
ನೈಟ್ ಕ್ಲಬ್‌ನಲ್ಲಿ ರಾಹುಲ್ ಗಾಂಧಿ ಜೊತೆ ಇದ್ದ ಮಹಿಳೆ ಯಾರು ? ನಡೆದಿದೆ ಹೀಗೊಂದು ಚರ್ಚೆ
ಯಾವುದೇ ತಪ್ಪಿನಿಂದಾಗಿ ಅಥವಾ ಖಾತೆಯಲ್ಲಿ ಹೆಚ್ಚುವರಿ ಹಣವನ್ನು ಪಾವತಿಸಿದ್ದರೆ ಅಥವಾ ವೇತನ ಭತ್ಯೆಯನ್ನು ಲೆಕ್ಕಾಚಾರ ಮಾಡುವ ಸಂದರ್ಭದಲ್ಲಿ ತಪ್ಪಾಗಿ ಹೆಚ್ಚುವರಿ ಪಾವತಿಯನ್ನು ಮಾಡಲಾಗಿರುತ್ತದೆ. ನಂತರದಲ್ಲಿ ಆ ವ್ಯವಹಾರದಲ್ಲಿ ತಪ್ಪಾಗಿದೆ ಎಂದು ಕಂಡುಬಂದಲ್ಲಿ ಅಂತಹ ಹೆಚ್ಚುವರಿ ಪಾವತಿಗಳು ಅಥವಾ ಭತ್ಯೆಯನ್ನು ನಿವೃತ್ತಿಯಾದ ನಂತರ ಉದ್ಯೋಗಿಯಿಂದ ಮರು ಪಡೆಯುವಂತಿಲ್ಲ ಎಂದು ನ್ಯಾಯಪೀಠ ತನ್ನ ತೀರ್ಪಿನಲ್ಲಿ ಸ್ಪಷ್ಟಪಡಿಸಿದೆ.