
ಬೆಂಗಳೂರು: ಮೇ 2024ರ ಮಾಹೆಯಲ್ಲಿ ನಡೆಯಲಿರುವ ಡಿ.ಇಎಲ್.ಇಡಿ/ಡಿ.ಪಿಎಸ್.ಇ/ಡಿ.ಪಿ.ಇಡಿ ಮುಖ್ಯ ಪರೀಕ್ಷೆಯನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ.
ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಮೇ 27 ರಿಂದ ಜೂನ್ 1ರವರೆಗೆ ನಡೆಸಲು ನಿಗದಿಪಡಿಸಿದ್ದ ಡಿ.ಇಎಲ್.ಇಡಿ/ಡಿ.ಪಿಎಸ್.ಇ/ಡಿ.ಪಿ.ಇಡಿ ಪರೀಕ್ಷೆಗಳನ್ನು ತಾತ್ಕಾಲಿಕವಾಗಿ ಮುಂದೂಡಿದೆ. ಪರೀಕ್ಷೆ ನಡೆಯುವ ದಿನಾಂಕಗಳನ್ನು ಮುಂದಿನ ದಿನಗಳಲ್ಲಿ ತಿಳಿಸಲಾಗುವುದು. ಈ ಮಾಹಿತಿಯನ್ನು ಸಂಬಂಧಿಸಿದ ಡಿ.ಇಎಲ್.ಇಡಿ/ಡಿ.ಪಿಎಸ್.ಇ/ಡಿ.ಪಿ.ಇಡಿ ಸಂಸ್ಥೆಗಳಿಗೆ ತಿಳಿಸಲು ಮಂಡಳಿಯ ನಿರ್ದೇಶಕರು ಸೂಚಿಸಿದ್ದಾರೆ.
