
ನವದೆಹಲಿ: ಐಸಿಎಸ್ಇ 10 ಮತ್ತು 12 ನೇ ತರಗತಿಗೆ ಆಫ್ಲೈನ್ ಪರೀಕ್ಷೆ ನಡೆಸುವುದಾಗಿ ಪರೀಕ್ಷಾ ಮಂಡಳಿ ಮಾಹಿತಿ ನೀಡಿದೆ,
ಐಸಿಎಸ್ಇ 10 ಮತ್ತು 12ನೇ ತ ರಗತಿಯ ಮೊದಲ ಅವಧಿಯ ಪರೀಕ್ಷೆಗಳನ್ನು ಭೌತಿಕ ರೂಪದಲ್ಲಿ ನಡೆಸಲಾಗುತ್ತದೆ. ವಿದ್ಯಾರ್ಥಿಗಳು, ಶಾಲೆಗಳು ಮತ್ತು ಪೋಷಕರು ಆಕ್ಷೇಪ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಆನ್ಲೈನ್ ಪರೀಕ್ಷೆ ನಡೆಸುವ ನಿರ್ಧಾರವನ್ನು ಮಂಡಳಿ ಬದಲಾಯಿಸಿದ್ದು, ಭೌತಿಕ ರೂಪದಲ್ಲಿ ಪರೀಕ್ಷೆ ನಡೆಸಲಾಗುವುದು.
ವೆಂಬರ್ 29 ರಿಂದ 10ನೇ ತರಗತಿ ಪರೀಕ್ಷೆಗಳು ಆರಂಭವಾಗಲಿವೆ. 12ನೇ ತರಗತಿ ಪರೀಕ್ಷೆಗಳು ನವೆಂಬರ್ 12 ರಿಂದ ಶುರುವಾಗಲಿವೆ. https://www.cisce.org/ ವೆಬ್ಸೈಟ್ ನಲ್ಲಿ ಪರೀಕ್ಷಿತ ವೇಳಾಪಟ್ಟಿ ಗಮನಿಸಬಹುದಾಗಿದೆ.