ತುಮಕೂರು: ರಾಷ್ಟ್ರೀಯ ಅರ್ಹತಾ ಪರೀಕ್ಷೆ ಪ್ರಶ್ನೆ ಪತ್ರಿಕೆಯಲ್ಲಿ ಗೊಂದಲ ಉಂಟಾಗಿದೆ. ಕನ್ನಡ ಭಾಷೆಯ ಪ್ರಶ್ನೆಪತ್ರಿಕೆಯಲ್ಲಿ ಹಿಂದಿ ಭಾಷೆಯ ಪ್ರಶ್ನೆಗಳನ್ನು ಮುದ್ರಿಸಲಾಗಿದೆ.
10 ಅಂಕಗಳಿಗೆ ಮಾತ್ರ ಕನ್ನಡ ಭಾಷೆಯ ಪ್ರಶ್ನೆಗಳು ಇದ್ದು, ಉಳಿದ 90 ಅಂಕಗಳಿಗೆ ಹಿಂದಿ ಭಾಷೆ ಪ್ರಶ್ನೆಗಳು ಇರುವುದಕ್ಕೆ ಅಭ್ಯರ್ಥಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ತುಮಕೂರಿನ ಎಸ್ಐಟಿ ಕಾಲೇಜಿನಲ್ಲಿ ಪರೀಕ್ಷಾರ್ಥಿಗಳು ಪರೀಕ್ಷೆಗೆ ಹಾಜರಾಗದೆ ಧರಣಿ ನಡೆಸಿದ್ದಾರೆ.