ತಮ್ಮ ಸ್ನೇಹಿತನ ಮಗಳ ಮದುವೆಗೆಂದು ರಾಜಸ್ಥಾನದ ಹುನುಮಾನ್‌ಘಡಕ್ಕೆ ಆಗಮಿಸಿರುವ ಉತ್ತರಾಖಂಡ ಮಾಜಿ ಮುಖ್ಯಮಂತ್ರಿ ತೀರತ್ ಸಿಂಗ್ ರಾವತ್ ಇದೇ ವೇಳೆ ಸ್ನೇಹಿತನೊಂದಿಗೆ ಕುಣಿದು ಸಂಭ್ರಮಿಸಿದ್ದಾರೆ.
ತೀರತ್ ಸ್ನೇಹಿತ ಹರೀಶ್ ಚಮೋಲಿ ಖಾಸಗಿ ಶಾಲೆಯೊಂದರಲ್ಲಿ ವಾಚ್‌ಮನ್ ಆಗಿ ಕೆಲಸ ಮಾಡುತ್ತಾರೆ. ಧರ್ಮಶಾಲೆಯೊಂದರಲ್ಲಿ ಆಯೋಜಿಸಲಾಗಿದ್ದ ಮದುವೆ ಕಾರ್ಯಕ್ರಮದಲ್ಲಿ ವಧುವವರನ್ನು ಆಶೀರ್ವದಿಸಿದ ತೀರತ್, ಸ್ನೇಹಿತನ ಕುಟುಂಬದೊಂದಿಗೆ ಒಂದಿಡೀ ದಿನ ಕಳೆದಿದ್ದಾರೆ.
ರಾಜ್ಯದ ರೈತರಿಗೆ ಮತ್ತೊಂದು ಗುಡ್ ನ್ಯೂಸ್, ದೇಶದಲ್ಲೇ ಮೊದಲ ಬಾರಿಗೆ ಪ್ರತಿ ಲೀಟರ್ ಡೀಸೆಲ್ ಗೆ 20 ರೂ. ಸಬ್ಸಿಡಿ
“ನನ್ನ ಸ್ನೇಹಿತ ಶುದ್ಧ ಹೃದಯದ ವ್ಯಕ್ತಿ. ಆತನ ಮಗಳು ನನ್ನ ಮಗಳಿದ್ದಂತೆ, ಆಕೆಯ ಮದುವೆ ಸಮಾರಂಭದಲ್ಲಿ ಭಾಗಿಯಾಲು ನಾನು ಇಲ್ಲಿಗೆ ಆಗಮಿಸಿದ್ದೇನೆ,” ಎಂದು ರಾವತ್ ತಿಳಿಸಿದ್ದಾರೆ.
ಕನ್ಯಾಪೂಜೆ ಮಾಡಿ ಮಕ್ಕಳೊಂದಿಗೆ ನವರಾತ್ರಿ ಸಂಭ್ರಮ ಹಂಚಿಕೊಂಡ ಶಿಲ್ಪಾ ಶೆಟ್ಟಿ
ತಮ್ಮ ಸ್ನೇಹಿತನ ಆಗಮನಕ್ಕೆ ಸಂತಸ ವ್ಯಕ್ತಪಡಿಸಿದ ಚಮೋಲಿ, “ರಾವತ್ ಮಾತಿಗೆ ಬದುಕುವ ವ್ಯಕ್ತಿ. ನನ್ನ ಮಗಳ ಮದುವೆಯಲ್ಲಿ ಭಾಗಿಯಾಗಲು ಹನುಮಾನ್‌ಘಡಕ್ಕೆ ಆಗಮಿಸುವುದಾಗಿ ಮಾತು ಕೊಟ್ಟಿದ್ದ, ಅದನ್ನು ಈಗ ಉಳಿಸಿಕೊಂಡಿದ್ದಾನೆ,” ಎಂದಿದ್ದಾರೆ.
ಉತ್ತರಾಖಂಡದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿ ಐದು ತಿಂಗಳಲ್ಲಿ ತೀರತ್ ತಮ್ಮ ಹುದ್ದೆಗೆ ರಾಜೀನಾಮೆ ಕೊಟ್ಟಿದ್ದರು.