alex Certify ತಾಯಿ ಮಗುವಿನೊಂದಿಗಿದ್ದ ಚಿತ್ರವನ್ನೇ ಅಶ್ಲೀಲ ಎಂದು ಪರಿಗಣಿಸಿದ ಟ್ವಿಟ್ಟರ್; ಅಕೌಂಟ್ ಬ್ಯಾನ್ ಮಾಡಿದ್ದಕ್ಕೆ ವ್ಯಾಪಕ ಆಕ್ರೋಶ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತಾಯಿ ಮಗುವಿನೊಂದಿಗಿದ್ದ ಚಿತ್ರವನ್ನೇ ಅಶ್ಲೀಲ ಎಂದು ಪರಿಗಣಿಸಿದ ಟ್ವಿಟ್ಟರ್; ಅಕೌಂಟ್ ಬ್ಯಾನ್ ಮಾಡಿದ್ದಕ್ಕೆ ವ್ಯಾಪಕ ಆಕ್ರೋಶ

ಅಮೆರಿಕಾದ ರಾಷ್ಟ್ರೀಯ ಸುರಕ್ಷಾ ಏಜನ್ಸಿಯ ಮಾಜಿ ಉದ್ಯೋಗಿ ವಿಸಿಲ್ ಬೋವರ್‌ ಎಡ್ವರ್ಡ್ ಸ್ಕೋಡೆನ್ ಅವರ ಪತ್ನಿ ಇತ್ತಿಚೆಗೆ ಮಗುವಿನ ಜೊತೆಗೆ ಇರುವ ತಮ್ಮ ಫೋಟೋವೊಂದನ್ನ ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದರು.

ಆದರೆ ಈಗ ಆ ಫೋಟೋವನ್ನ ನಿಷೇಧಿಸುವುದಲ್ಲದೇ ಟ್ವಿಟ್ಟರ್ ಅಕೌಂಟ್‌ನ್ನ ಲಾಕ್ ಮಾಡಲಾಗಿದೆ. ಈ ಕಾರಣಕ್ಕಾಗಿ ಎಡ್ವರ್ಡ್ ಸ್ಫೋಡೆನ್ ಹಾಗೂ ಅವರ ಪತ್ನಿ ಲಿಂಡ್ ಮಿಲ್ ಟ್ವಿಟ್ಟರ್ ಮಾಲೀಕ ಎಲೋನ್ ಮಸ್ಕ್ ವಿರುದ್ಧ ಫುಲ್ ಗರಂ ಆಗಿದ್ದಾರೆ.

ಅಸಲಿಗೆ ಪೋಸ್ಟ್ ಮಾಡಲಾಗಿರೋ, ಈ ಪೋಸ್ಟ್‌ನಲ್ಲಿ ಹಸುಕಂದ ಹಾಗೂ ತಾಯಿ ಇಬ್ಬರು ಸಹ ನೋಡಬಹುದಾಗಿದೆ. ಇಲ್ಲಿ ಇವರಿಬ್ಬರ ದೇಹದ ಮೇಲೆ ಬಟ್ಟೆ ಇಲ್ಲ. ಇದನ್ನೇ ನೆಪ ಮಾಡಿಕೊಂಡು ಅವರ ಅಕೌಂಟ್‌ನ್ನ ಬ್ಯಾನ್ ಮಾಡಲಾಗಿದೆ.

ಈ ಕ್ರಮ ಎಷ್ಟು ಸರಿ ಅನ್ನುವುದೇ ಈಗ ಲಿಂಡ್ಸೆ ಹಾಗೂ ಎಡ್ವರ್ಡ್‌ ಪ್ರಶ್ನೆಯಾಗಿದೆ. ಅಷ್ಟಕ್ಕೂ ಈ ಫೋಟೋ ಕೆಲ ವರ್ಷಗಳ ಹಿಂದಿನದ್ದಾಗಿದ್ದು, ಇದು ಇತ್ತೀಚಿನದ್ದು ಅಲ್ಲ ಎಂದು ಸ್ಪಷ್ಟಪಡಿಸಿದ್ದಾರೆ ಎಡ್ವರ್ಡ್.

ಈ ಫೋಟೋವನ್ನ ಹಂಚಿಕೊಂಡಿದ್ದ ಅವರು “ಟ್ವಿಟರ್, ಕೇವಲ ಮಗುವಿನ ಹಳೆಯ ಫೋಟೋಗಾಗಿ ನನ್ನ ಹೆಂಡತಿಯ ಖಾತೆಯನ್ನು ಲಾಕ್ ಮಾಡಿದೆ. ಇನ್‌ಸ್ಟಾಗ್ರಾಮ್ ಸಹ ಸೋಶಿಯಲ್ ಮೀಡಿಯಾ, ಇದಕ್ಕೆ ಈ ರೀತಿಯ ಫೋಟೋದಿಂದ ಯಾವುದೇ ಸಮಸ್ಯೆ ಇಲ್ಲ. ಆದರೆ ಟ್ವಿಟರ್‌ಗೆ ಇದೆ. ಈ ವಿಷಯವನ್ನ ತಂದೆ-ತಾಯಿಯಾಗಿ ಹೇಗೆ ತೆಗೆದುಕೊಳ್ಳಬೇಕು. ಮುದ್ದು ಮುದ್ದು ಮಕ್ಕಳ ಬೆತ್ತಲೆ ಚಿತ್ರವನ್ನೂ ಅಶ್ಲೀಲ ದೃಷ್ಟಿಯಿಂದ ನೋಡಿ ಅದನ್ನ ಬ್ಯಾನ್ ಮಾಡುವುದು ಸರಿಯೇ? ಎಂದು ಎಲಾನ್ ಮಸ್ಕ್ ಗೆ ಪ್ರಶ್ನೆ ಮಾಡಿದ್ದಾರೆ ಎಡ್ವರ್ಡ್ ಸ್ನೋಡೆನ್.

ತಾಯಿ-ಮಗುವಿನ ಫೋಟೋವನ್ನೇ ನಗ್ನ ಮತ್ತು ಅಶ್ಲೀಲ ಎಂದು ಹೇಳಿರೋ ಟ್ವಿಟ್ಟರ್ ಈ ನಡೆ ಸರಿ ಅಲ್ಲ. ಇವರ ವಿರುದ್ಧ ಕ್ರಮ ಕೈಗೊಳ್ಳಲೇ ಬೇಕು ಎಂದು ಹೇಳಿದ್ದಾರೆ ಸ್ನೋಡೆನ್.‌

ಅಷ್ಟಕ್ಕೂ ಎಡ್ವರ್ಡ್ ಸ್ನೋಡೆನ್ ಯಾರು ಗೊತ್ತಾ..? ಇವರು ಯುಎಸ್ ಸರ್ಕಾರದ ಕಣ್ಣಾವಲು ಕಾರ್ಯಕ್ರಮಗಳನ್ನು ವಿವರಿಸುವ ದಾಖಲೆಗಳನ್ನು ಬೇಹುಗಾರಿಕೆ ಮತ್ತು ಸೋರಿಕೆ ಮಾಡಿದ ಆರೋಪ ಹೊತ್ತಿರುವ ವ್ಯಕ್ತಿ. ಅವರು ಯುಎಸ್‌ನಲ್ಲಿ ವಿಚಾರಣೆಯನ್ನು ಎದುರಿಸುವುದನ್ನು ತಪ್ಪಿಸಲು 2013 ರಲ್ಲಿ ರಷ್ಯಾಕ್ಕೆ ಓಡಿಹೋದರು. ಸೆಪ್ಟೆಂಬರ್ 2022 ರಲ್ಲಿ, ರಷ್ಯಾ ಸ್ನೋಡೆನ್ ಗೆ ಪೌರತ್ವವನ್ನು ನೀಡಿತು.

— Edward Snowden (@Snowden) February 18, 2023

Related News

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...