ನ್ಯೂಯಾರ್ಕ್: ವಿಶ್ವದ ಶ್ರೀಮಂತ ಉದ್ಯಮಿ ಮಸ್ಕ್ ಟ್ವಿಟರ್ ಅನ್ನು ಖರೀದಿಸಿದ ನಂತರ ಜಾಗತಿಕ ಮಟ್ಟದಲ್ಲಿ ಉದ್ಯೋಗ ಕಡಿತ ಆರಂಭಿಸಿದ್ದಾರೆ. ಭಾರತದ ಮೂಲದ ಎಂಜಿನಿಯರ್ಸ್ ಮಾರಾಟ, ಮಾರ್ಕೆಟಿಂಗ್ ಮತ್ತು ಸಂವಹನ ತಂಡಗಳ ಉದ್ಯೋಗಿಗಳನ್ನೂ ವಜಾಗೊಳಿಸಲಾಗಿದೆ. ವಜಾ ಮಾಡಿರುವ ಬಗ್ಗೆ ತನ್ನ ಸಹೋದ್ಯೋಗಿಗಳಿಗೆ ಎಲಾನ್ ಮಸ್ಕ್ ಇಮೇಲ್ ಮೂಲಕ ಸಂದೇಶ ಕಳುಹಿಸಿದ್ದು, ಇದೀಗ ಭಾರಿ ಚರ್ಚೆಯಲ್ಲಿದೆ.
ಈಗ ಅಪರೂಪದ ಘಟನೆಯೊಂದರಲ್ಲಿ ವಜಾಗೊಂಡ ಉದ್ಯೋಗಿಯೊಬ್ಬರಿಗೆ ಟ್ವಿಟರ್ ಅಭಿನಂದನಾ ಪತ್ರವನ್ನು ಕಳುಹಿಸಿದ್ದು ಇದೀಗ ಭಾರಿ ಸುದ್ದಿಯಾಗುತ್ತಿದೆ. ಈ ಉದ್ಯೋಗಿ ತಮ್ಮೊಂದಿಗೆ ಹತ್ತು ವರ್ಷಗಳನ್ನು ಕಳೆದುದಕ್ಕಾಗಿ ಈ ಅಭಿನಂದನಾ ಪತ್ರ ಎಂದು ಉಲ್ಲೇಖಿಸಲಾಗಿದೆ.
ಟ್ವಿಟರ್‌ನ ಗ್ರಾಹಕ ಒಳನೋಟಗಳ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಹಿರಿಯ ಸಂಶೋಧನಾ ವ್ಯವಸ್ಥಾಪಕರಾದ ಎಲೈನ್ ಫಿಲಾಡೆಲ್ಫೋ ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ಈ ಕುರಿತು ಪೋಸ್ಟ್ ಮಾಡಿದ್ದಾರೆ. ಟ್ವಿಟರ್ ಜತೆ ನೀವು 10 ವರ್ಷಗಳ ಮೈಲುಗಲ್ಲನ್ನು ಪೂರೈಸಿದಕ್ಕಾಗಿ ಈ ಉಡುಗೊರೆ ಎಂದು ಸೂಚಿಸಲು “#10” ಎಂದು ಕೆತ್ತಲಾದ ಪತ್ರ ಮತ್ತು ಮರದ ಬ್ಲಾಕ್ ಅನ್ನು ನಾವು ಟ್ವಿಟರ್ನಲ್ಲಿ ನೋಡಬಹುದು.
10 ವರ್ಷಗಳ ಸೇವೆಯ ನಂತರ ಕೆಲಸದಿಂದ ಹೊರಕ್ಕೆ ಹೋಗಲು ತುಂಬಾ ಕಷ್ಟವಾಗುತ್ತಿದೆ. ಇದೊಂದು ರೀತಿಯಲ್ಲಿ ಕ್ರೂರವಾದ ಮಾರ್ಗವಾಗಿದೆ ಎಂದೂ ಎಲೈನ್ ಫಿಲಾಡೆಲ್ಫೋ ಹೇಳಿದ್ದಾರೆ.