ವಿಜಯನಗರ: ಅಮಾಯಕರನ್ನು ನಂಬಿಸಿ ವಿವಿಧ ಆಮಿಷಗಳನ್ನು, ಸುಳ್ಳು ಭರವಸೆಗಳನ್ನು ಕೊಟ್ಟು ಹೇಗೆಲ್ಲ ಹಣ ಪಡೆದು ವಂಚಿಸುತ್ತಾರೆ ಎಂಬುದಕ್ಕೆ ಈ ಘಟನೆ ಒಂದು ಉದಾಹರಣೆ. ಐಐಟಿ ನಿವೃತ್ತ ಪ್ರಾಂಶುಪಾಲರೊಬ್ಬರನ್ನೇ ವಂಚಿಸಿರುವ ಆಸಾಮಿ, ಬರೋಬ್ಬರಿ 45 ಲಕ್ಷಕ್ಕೂ ಅಧಿಕರ ಹಣ ದೋಚಿ ಎಸ್ಕೇಪ್ ಆಗಿದ್ದಾನೆ.
ನಿವೃತ್ತ ಪ್ರಾಂಶುಪಾಲ ನಾಗೇಂದ್ರಪ್ಪ ಎಂಬುವವರಿಗೆ ಕರೆ ಮಾಡಿದ್ದ ವ್ಯಕ್ತಿಯೊಬ್ಬ ತಾನು ಮುಂಬೈನಲ್ಲಿ ಕಾರ್ಯನಿರ್ವಹಿಸುತ್ತಿರುವುದಾಗಿ ಹೇಳಿ ಪರಿಚಯ ಮಾಡಿಕೊಂಡಿದ್ದಾನೆ. ಬಳಿಕ ಖಾಸಗಿ ಗ್ಯಾಸ್ ಕಂಪನಿ ಡೀಲರ್ ಶಿಪ್ ಕೊಡಿಸುವುದಾಗಿ ಭರವಸೆ ನೀಡಿದ್ದಾನೆ.
ಗೋ ಗ್ಯಾಸ್ ನ ಡೀಲರ್ ಶಿಪ್ ಪಡೆದು ನಿಮ್ಮ ಹಳ್ಳಿಯಲ್ಲಿ ವ್ಯಾಪಾರ ಆರಂಭಸಬಹುದು ಎಂದು ನಬಿಸಿದ್ದಾನೆ. ನಿವೃತ್ತ ಪ್ರಾಂಶುಪಾಲರು ಇದನ್ನು ನಂಬಿ ತಾವು ಕೂಡಿಟ್ಟ ಹಣವನ್ನೆಲ್ಲ ವ್ಯಕ್ತಿಯ ಖಾತೆಗೆ ಹಂತ ಹಂತವಗಿ ವರ್ಗಾಯಿಸಿದ್ದಾರೆ. ಹೀಗೆ ಬರೋಬ್ಬರಿ 45,80,300 ರೂಪಾಯಿ ಹಣವನ್ನು ವಂಚಕನ ಖಾತೆಗೆ ವರ್ಗಾಯಿಸಲಾಗಿದೆ. ಸೆ.22ರಂದು ಕೊನೇ ಕಂತು 5 ಲಕ್ಷ ಹಣ ವನ್ನು ಪಡೆದ ವಂಚಕ ಬಳಿಕ ಫೋನ್ ಸ್ವಿಚ್ ಆಫ್ ಮಾಡಿಕೊಂಡಿದ್ದಾನೆ. ಆಗಲೇ ನಾಗೇಂದ್ರಪ್ಪಗೆ ತಾನು ಮೋಸ ಹೋಗಿರುವುದು ಗೊತ್ತಾಗಿದೆ.
ವಿಜಯನಗರ ಜಿಲ್ಲೆಯ ಕೊಟ್ಟೂರು ಪೊಲೀಸ್ ಠಾಣೆಯಲ್ಲಿ ನಾಗೇಂದ್ರಪ್ಪ ಪ್ರಕರಣ ದಾಖಲಿಸಿದ್ದಾರೆ. ಎಫ್ ಐ ಆರ್ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಾಗಿ ಶೋಧ ನಡೆಸಿದ್ದಾರೆ.
ಅಷ್ಟಕ್ಕೂ ನಾಗೇಂದ್ರಪ್ಪ ಮೋಸ ಹೋಗಿದ್ದು ಹೇಗೆ ನೋಡಿ…ಆನ್ ಲೈನ್ ನಲ್ಲಿ ಸಿಕ್ಕ ನಂಬರ್. ಮುಂಬೈನಲ್ಲಿರುವ ಗೋ ಗ್ಯಾಸ್ ಕಂಪನಿಗೆ ಕರ್ನಾಟಕದಲ್ಲಿ ಡೀಲರ್ ಶಿಪ್ ಸಿಗುತ್ತೆ ಎಂಬ ಮಾಹಿತಿ ನೋಡಿದ ನಾಗೇಂದ್ರಪ್ಪ ಆನ್ ಲೈನ್ ನಲ್ಲಿದ್ದ ನಂಬರ್ ಗೆ ಕರೆ ಮಾಡಿದ್ದಾರೆ. ಶಶಾಂಕ್ ತಿವಾರಿ ಎಂಬ ಹೆಸರಿನ ವ್ಯಕ್ತಿ ಕರೆ ಸ್ವೀಕರಿಸಿ ಗೂಗಲ್ ಪೇ ಅಥವಾ ಆರ್ ಟಿ ಜಿ ಎಸ್ ಮೂಲಕ ಹಣ ವರ್ಗಾಯಿಸಲು ಹೇಳಿದ್ದಾನೆ. ಒಂದು ತಿಂಗಳ ಕಾಲ ಬೇಗ ಬೇಗ ಹಣ ಪಾವತಿ ಮಾಡಿದರೆ ಬೇಗನೇ ಕೆಲಸ ಮಾಡಿಕೊಡುವುದಾಗಿ ಹೇಳಿ ಹಂತ ಹಂತವಾಗಿ ಹಣ ವರ್ಗಾಯಿಸಿಕೊಂಡಿದ್ದಾನೆ. ಸೆ.22ರಂದು ಕೊನೇ ಕಂತು 5 ಲಕ್ಷ ಹಣ ವರ್ಗಾವಣೆ ಮಾಡಿಕೊಂಡ ಆಸಾಮಿ ಅದಾದ ಬಳಿಕ ಫೋನ್ ಸ್ವಿಚ್ ಆಫ್ ಮಾಡಿಕೊಂಡಿದ್ದಾನೆ. ಒಂದು ವಾರಗಳ ಕಾಲ ನಿರಂತರವಾಗಿ ಶಶಾಂಕ್ ತಿವಾರಿ ನಂಬರ್ ಗೆ ಕರೆ ಮಾಡಿದ್ದರಂತೆ ನಾಗೇಂದ್ರಪ್ಪ, ಆದರೆ ಯಾವುದೇ ಸ್ಪಂದನೆ ಇಲ್ಲ. ಫೋನ್ ಸ್ವಿಚ್ಡ್ ಆಫ್ ಆಗಿದೆ. ಇದರಿಂದ ಗಾಬರಿಯಾದ ನಾಗೇಂದ್ರಪ್ಪ ತಾನು ಮೋಸ ಹೋಗಿರುವುದಾಗಿ ಅರಿತಿದ್ದಾರೆ.