
ಗದಗ: ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ದುಡ್ಡಿಗಾಗಿ ಎಂಎಲ್ ಎ ಟಿಕೆಟ್ ನ್ನು ಮಾರಾಟ ಮಾಡಿದ್ದಾರೆ ಎಂದು ಮಾಜಿ ಶಾಸಕ ರಾಮಣ್ಣ ಲಮಾಣಿ ಗಂಭೀರ ಆರೋಪ ಮಾಡಿದ್ದಾರೆ.
ಗದಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರಾಮಣ್ಣ ಲಮಾಣಿ, ವಿಧಾನಸಭಾ ಚುನಾವಣೆ ವೇಳೆ ದುಡ್ದಿಗಾಗಿ ಶಿರಹಟ್ಟಿ ಎಂಎಲ್ ಎ ಟಿಕೆಟ್ ನ್ನು ಬಿಜೆಪಿ ಮಾರಾಟ ಮಾಡಿದೆ. ಹಣಕ್ಕಾಗಿ ಅಂದಿನ ಸಿಎಂ ಬಸವರಾಜ್ ಬೊಮ್ಮಾಯಿ ಬಿಜೆಪಿ ಟಿಕೆಟ್ ಮಾರಿದ್ದಾರೆ ಎಂದು ಆರೋಪಿಸಿದ್ದಾರೆ.
ಶಿರಹಟ್ಟಿ ಕ್ಷೇರದವರಲ್ಲದವರಿಗೆ ಬಿಜೆಪಿ ಟಿಕೆಟ್ ಮಾರಿದರು. ಬಸವರಾಜ್ ಬೊಮ್ಮಾಯಿ ಅವರಿಂದ ಶಿರಹಟ್ಟಿ ಕ್ಷೇತ್ರಕ್ಕೆ ಅನ್ಯಾಯವಾಗಿದೆ ಎಂದು ಕಿಡಿಕಾರಿದರು.
ಸಿಎಂ ಆಗಿದ್ದಾಗ ಜಾಲವಾಡಗಿ ಏತ ನೀರಾವರಿ ಯೋಜನೆಗೆ ಭೂಮಿ ಪೂಜೆ ಮಾಡಿದರು. ಅನುದಾನ ನೀಡುವುದಾಗಿ ಹೇಳಿದ್ರು. ಆದರೆ ಬೊಮ್ಮಾಯಿ ಅನುದಾನವನ್ನೇ ನೀಡಲಿಲ್ಲ. ಈಗ ಸಿಎಂ ಸಿದ್ದರಾಮಯ್ಯ 290 ಕೋಟಿ ಘೋಷಣೆ ಮಾಡಿದ್ದಾರೆ ಎಂದರು. ಬಸವರಾಜ್ ಬೊಮ್ಮಾಯಿಗೆ ಧಮ್ಮು ತಾಕತ್ತು ಇದ್ದರೆ ಈ ಚುನಾವಣೆಯಲ್ಲಿ ಗೆಲ್ಲಲಿ. ಬೊಮ್ಮಾಯಿ ಅವರನ್ನು ಸೋಲಿಸುತ್ತೇವೋ ಇಲ್ವೋ ಗೊತ್ತಿಲ್ಲ. ಆದರೆ ಅನಂದಸ್ವಾಮಿ ಗಡ್ಡದೇವರಮಠ ಅವರನ್ನು ಆರಿಸಿ ತರುತ್ತೇವೆ ಎಂದು ಹೇಳಿದರು.