ಬೆಳಗಾವಿ : ಯುವತಿಯ ಖಾಸಗಿ ವಿಡಿಯೋ ಹರಿಬಿಟ್ಟು ಮದುವೆ ನಿಲ್ಲಿಸಿದ ಮಾಜಿ ಪ್ರೇಮಿಯೋರ್ವ ಪೊಲೀಸರ ಅತಿಥಿಯಾಗಿದ್ದಾನೆ. ಹೌದು, ಪಾಗಲ್ ಪ್ರೇಮಿಯ ಹುಚ್ಚಾಟಕ್ಕೆ ಯುವತಿಯ ಜೀವನವೇ ಹಾಳಾಗಿದೆ.
ಯುವತಿ ತನ್ನನ್ನು ಬಿಟ್ಟು ಬೇರೊಬ್ಬನನ್ನು ಮದುವೆಯಾಗಲು ಹೊರಟ್ಟಿದ್ದಕ್ಕೆ ಸಿಟ್ಟಾದ ಮಾಜಿ ಪ್ರೇಮಿ ಮುತ್ತುರಾಜ್ ಎಂಬಾತ ಯುವತಿಯೊಂದಿಗೆ ಕಳೆದಿದ್ದ ಖಾಸಗಿ ಕ್ಷಣದ ಫೋಟೋ, ವಿಡಿಯೋವನ್ನು ಪತಿಗೆ ಕಳುಹಿಸಿದ್ದಾನೆ. ಈ ವಿಚಾರ ತಿಳಿದ ಗಂಡಿನ ಕಡೆಯವರು ಮದುವೆ ಬೇಡ ಎಂದು ಹೇಳಿದ್ದಾರೆ.
ಮುತ್ತುರಾಜ್ (24) ಎಂಬಾತ ಯುವತಿಯೋರ್ವಳನ್ನು ಪ್ರೀತಿಸಿದ್ದಾನೆ. ಇವರಿಬ್ಬರು ಕೆಲವರ್ಷ ಜೊತೆಯಲ್ಲಿ ಸುತ್ತಾಡಿದ್ದರು. ಅಲ್ಲದೇ ಯುವತಿ ಮುತ್ತುರಾಜ್ ಬಲೆಗೆ ಬಿದ್ದು ದೈಹಿಕ ಸಂಪರ್ಕವನ್ನು ಬೆಳೆಸಿದ್ದಾಳೆ . ಈ ವೇಳೆ ಮುತ್ತುರಾಜ್ ಖಾಸಗಿ ವಿಡಿಯೋಗಳನ್ನು ಕದ್ದು ಸೆರೆ ಹಿಡಿದಿದ್ದಾನೆ. ನಂತರ ಯಾವಾಗ ಯುವತಿ ಮದುವೆ ಆಗೋದಿಲ್ಲ ಎಂದು ಉಲ್ಟಾ ಹೊಡೆದು ಬೇರೊಬ್ಬನನ್ನು ಮದುವೆಯಾಗಲು ಸಿದ್ದಳಾದಳೋ ಆಗ ಮುತ್ತುರಾಜ್ ಯುವತಿಯ ಮನೆಯವರು ನೋಡಿದ ಗಂಡಿಗೆ ಖಾಸಗಿ ಫೋಟೋ, ವಿಡಿಯೋ ಕಳುಹಿಸಿದ್ದಾನೆ. ಈ ವಿಚಾರ ತಿಳಿದ ಗಂಡಿನ ಕಡೆಯವರು ಮದುವೆ ಬೇಡ ಎಂದು ಹೇಳಿದ್ದಾರೆ.
ಸದ್ಯ, ಆರೋಪಿ ಮುತ್ತುರಾಜ್ ವಿರುದ್ಧ ಯುವತಿ ದೂರು ದಾಖಲಿಸಿದ್ದು, ಪೊಲೀಸರು ಆತನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.