ನವದೆಹಲಿ: ಗೂಗಲ್ನ ಮಾಜಿ ಎಂಡಿ ಪರ್ಮಿಂದರ್ ಸಿಂಗ್ ಅವರ ಮೂಲ ಯಾವುದು ಎಂಬ ನೆಟ್ಟಿಗರು ಬಹಳ ಕುತೂಹಲದಿಂದಿದ್ದು ಈ ಬಗ್ಗೆ ಖುದ್ದು ಪರ್ಮಿಂದರ್ ಸಿಂಗ್ ಅವರೇ ಮಾಹಿತಿ ಹಂಚಿಕೊಂಡಿದ್ದಾರೆ.
ಈ ಸಂದರ್ಭದಲ್ಲಿ ಸಿಂಗ್ ಅವರು ತಮ್ಮ 20 ವರ್ಷದ ಮಗನ ಹುಟ್ಟುಹಬ್ಬದ ಸಂದೇಶದ ಕುರಿತು ಉಲ್ಲೇಖಿಸಿದ್ದಾರೆ. ಆ ಸಮಯದಲ್ಲಿ ಕೇವಲ 9 ವರ್ಷ ವಯಸ್ಸಿನ ತನ್ನ ಮಗುವಿಗೆ ಅವನ ಜನಾಂಗೀಯತೆಯ ಬಗ್ಗೆ ಪ್ರಶ್ನಿಸಲಾಗಿತ್ತು. ಪಂಜಾಬಿ ಮನೆತನದವರಾಗಿದ್ದರೂ ಮತ್ತು ಕರ್ನಾಟಕದ ಬೆಂಗಳೂರಿನಲ್ಲಿ ಬೆಳೆದರೂ ಅವರು “ಉತ್ತರ ಭಾರತೀಯ” ಎಂದು ಆಗ ಮಗ ಉತ್ತರಿಸಿದ್ದರು ಎಂದು ಸಿಂಗ್ ಹೇಳಿದ್ದಾರೆ.
“ನನ್ನ ಮಗ ಉತ್ತರ ಅಥವಾ ದಕ್ಷಿಣ ಭಾರತೀಯ ಎಂದು ಪ್ರಶ್ನಿಸಿದಾಗ ಅವನಿಗೆ 9 ವರ್ಷ ವಯಸ್ಸಾಗಿತ್ತು. ಅವನು ಬೆಂಗಳೂರಿನಲ್ಲಿ ಪಂಜಾಬಿ ಕುಟುಂಬದಲ್ಲಿ ಜನಿಸಿದನು. ನಾನು ಉತ್ತರ ಭಾರತೀಯ ಎಂದು ನಾನು ಭಾವಿಸುತ್ತೇನೆ. ನಾವು ಅನ್ವಯಿಸಲು ಪ್ರಯತ್ನಿಸುವ ಲೇಬಲ್‌ಗಳನ್ನು ಮಗ ತಿರಸ್ಕರಿಸುತ್ತಾನೆ. ಆತನಿಗೆ ಈಗ 20 ವರ್ಷ. ಈಗಲೂ ವರ್ಗೀಕರಣಗಳನ್ನು ವಿರೋಧಿಸುತ್ತಲೇ ಇರುತ್ತಾನೆ ಎಂದು ಸಿಂಗ್ ಟ್ವೀಟ್ ಮೂಲಕ ಹೇಳಿದ್ದಾರೆ.
ಲೆಬನಾನಿನ ಲೇಖಕ ಮತ್ತು ಕವಿ ಖಲೀಲ್ ಗಿಬ್ರಾನ್ ಅವರ “ಆನ್ ಚಿಲ್ಡ್ರನ್” ಎಂಬ ಸುಂದರ ಕವಿತೆಯನ್ನು ಸಿಂಗ್ ಅವರು ಶೇರ್ ಮಾಡಿಕೊಂಡಿದ್ದಾರೆ.
https://twitter.com/parrysingh/status/1602969145041379329?ref_src=twsrc%5Etfw%7Ctwcamp%5Etweetembed%7Ctwterm%5E1602969145041379329%7Ctwgr%5E6783cc704f7c6cc74b7505a3e4e54790ca8ee446%7Ctwcon%5Es1_&ref_url=https%3A%2F%2Fzeenews.india.com%2Fcompanies%2Fex-google-mds-son-was-asked-are-you-from-north-india-or-south-his-reply-will-warm-your-heart-2550287.html